ದುನಿಯಾ ವಿಜಯ್ 
ಸಿನಿಮಾ ಸುದ್ದಿ

ಹೊಸ ವರ್ಷಕ್ಕೆ ದುನಿಯಾ ವಿಜಯ್ ನಿರ್ದೇಶನದ ಸಲಗ ಟೈಟಲ್ ಟ್ರ್ಯಾಕ್ ಬಿಡುಗಡೆ

ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಸಲಗ ಸಿನಿಮಾ ಟೈಟಲ್ ಸಾಂಗ್ ಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಮಲೇಶಿಯಾದ ಹಿಪ್ ಹಾಪ್ ರ್ಯಾಪರ್ ಯೋಗಿ.ಬಿ ಹಿನ್ನೆಲೆ ಗಾಯನ ನೀಡಿದ್ದಾರೆ. 

ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ ಟೈಟಲ್ ಟ್ರ್ಯಾಕ್ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಕೆಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಸಲಗ ಸಿನಿಮಾ ಟೈಟಲ್ ಸಾಂಗ್ ಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಮಲೇಶಿಯಾದ ಹಿಪ್ ಹಾಪ್ ರ್ಯಾಪರ್ ಯೋಗಿ.ಬಿ ಹಿನ್ನೆಲೆ ಗಾಯನ ನೀಡಿದ್ದಾರೆ. 

ತಮಿಳು ಪ್ರೇಕ್ಷಕರಿಗೆ ಬಿ.ಯೋಗಿ ಚಿರಪರಿಚಿತವಾಗಿದ್ದು, ಕನ್ನಡದಲ್ಲಿ ಪರ್ಫೆಕ್ಟ್ ಆಗಿ ಹಾಡಲು ರೆಕಾರ್ಡಿಂಗ್ ಮೊದಲು ಪ್ರಾಕ್ಟೀಸ್ ಮಾಡಲಾಗಿದೆ, ಯೋಗಿ ಜೊತೆ ನಾರಾಯಣ್ ಶರ್ಮಾ ಮತ್ತು  ಸಂಜಿತ್ ಹೆಗ್ಡೆ ದನಿ ನೀಡಿದ್ದಾರೆ.

ಈ ಮೊದಲು ಸೂರಿ ಅಣ್ಣ ಎಂಬ ಮೊದಲ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಅದಾದ ನಂತರ ಮಳೆಯೇ ಮಳೆಯೇ ಹಾಗೂ ಸಂಜನಾ ಐ ಲವ್ ಯೂ ಹಾಡುಗಳು ಈ ಮೊದಲು ರಿಲೀಸ್ ಆಗಿ ಜನಪ್ರಿಯವಾಗಿವೆ. 

ಫೆಬ್ರವರಿ 23 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ, 14 ವರ್ಷದ ಹಿಂದೆ ವಿಜಯ್ ನಟನೆಯ ದುನಿಯಾ ಸಿನಿಮಾ ಕೂಡ ಇದೇ ದಿನಾಂಕದಲ್ಲಿ ರಿಲೀಸ್ ಆಗಿತ್ತು. 

ದುನಿಯಾ ವಿಜಯ್ ಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ,  ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ, ಅಚ್ಯುತ ಕುಮಾರ್ , ತ್ರಿವೇಣಿ ರಾವ್ ಹಾಗೂ ಯಶ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ