ಸಂಜನಾ 
ಸಿನಿಮಾ ಸುದ್ದಿ

ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರ: ಮೌಲ್ವಿ ವಿರುದ್ಧ ದೂರು ದಾಖಲು

ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮೂರು ತಿಂಗಳು ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ  ಬಿಡುಗಡೆ ಹೊಂದಿರುವ ನಟಿ ಸಂಜನಾ ಗಲ್ರಾನಿ ಅವರಿಗೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಬೆಂಗಳೂರು:  ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮೂರು ತಿಂಗಳು ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನಟಿ ಸಂಜನಾ ಗಲ್ರಾನಿ ಅವರಿಗೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು ನಟಿ ಸಂಜನಾ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ಸ್ಯಾಂಡಲ್ ವುಡ್ ನಟಿ ಸಂಜನಾ ಅವರನ್ನು ಬಲವಂತವಾಗಿ ಹಿಂದೂ ಧರ್ಮದಿಂದ ಇಸ್ಲಾಂ ಗೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾವಲಿಲುಲ್ಲಾ ಎಂಬ ಮೌಲ್ವಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಅಮೃತೇಶ್ ಎನ್ನುವವರು ಮೌಲ್ವಿ ವಿರುದ್ಧ ದೂರು ಸಲ್ಲಿಸಿದ್ದಾರೆ. 

ದೂರಿನ ಅನುಸಾರ ನಟಿ ಸಂಜನಾ ಅವರನ್ನು  09 ಅಕ್ಟೋಬರ್ 2018 ರಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಅಲ್ಲದೆ ಅವರಿಗೆ "ಮಹಿರಾ" ಎಂದು ಮರುನಾಮಕರಣ ಸಹ ಮಾಡಿದ್ದಾರೆ. ಇದಕ್ಕೆ ದಾಖಲೆಯಾಗಿ ಮರುನಾಮಕರಣ ಮಾಡಿದ ಪ್ರಮಾಣಪತ್ರ ಸಹ ನೀಡಲಾಗಿದೆ. ಆದರೆ ಈ ಮತಾಂತರ ನಟಿಯ ಇಚ್ಚೆಗೆ ವಿರುದ್ಧ, ಬಲವಂತದಿಂದ ನಡೆದಿದೆ ಎಂದು ಎಫ್​​​ಐಆರ್ ದಾಖಲಾಗಿದೆ. 

ಈ ಸಂಬಂಧ ಕಾಟನ್‌ಪೇಟೆ ಪೊಲೀಸರು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲು ತೀರ್ಮಾನಿಸಿದ್ದಾರೆ.

ನಟಿ ಸಂಜನಾ ಕಾರ್ಡಿಯಾಲಜಿಸ್ಟ್ ಆಗಿರುವ  ಡಾ. ಅಜೀಜ್ ಎನ್ನುವವರೊಂದಿಗೆ ಮದುವೆಯಾಗಿದ್ದರೆಂದು ಹೇಳಲಾಗುವ ಫೋಟೋ ಒಂದು ಕೆಲ ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಹರಿದಾಡಿತ್ತು. ಆ ವೇಳೆ ಸಂಜನಾ ಇಸ್ಲಾಂಗೆ ಮತಾಂತರವಾಗಿ ಹೆಸರು ಬದಲಿಸಿಕೊಂಡಿದ್ದರೆಂಬ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿತ್ತು. 

ಈ ನಡುವೆ ಜೈಲಿನಿಂದ ಹೊರಬಂದಿರುವ ಸಂಜನಾ ಯಲಹಂಕ ಬಳಿಯ ರೆಸಾರ್ಟ್ ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ