ಪೃಥ್ವಿ ಅಂಬರ್ 
ಸಿನಿಮಾ ಸುದ್ದಿ

ಲೈಫ್ ಈಸ್ ಬ್ಯೂಟಿಫುಲ್ ಮೂಲಕ ಗಾಯಕನಾದ ನಟ ಪೃಥ್ವಿ ಅಂಬರ್

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ತಮ್ಮ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ಪೃಥ್ವಿ ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಹಾಡೊಂದನ್ನು ಹಾಡಿದ್ದಾರೆ. 

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ತಮ್ಮ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ಪೃಥ್ವಿ ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಹಾಡೊಂದನ್ನು ಹಾಡಿದ್ದಾರೆ. 

ಯುವ ನಟ ಪೃಥ್ವಿ ಅಂಬರ್ ಗಾಯಕರಾಗಿ ಪ್ರಮೋಟ್ ಆಗಿದ್ದಾರೆ. 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ಹಾಡೊಂದನ್ನು ಪೃಥ್ವಿ ಅಂಬರ್ ಹಾಡಿದ್ದಾರೆ. ಪೃಥ್ವಿ ಅಂಬರ್ ಅನ್ನು ಹುಡುಕಿ ಬಂದ ಬಂಪರ್ ಆಫರ್ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ನಿರ್ದೇಶನವಿದೆ. ಈ ಹಾಡಿಗೆ ಪೃಥ್ವಿ ಅಂಬರ್ ಹಾಗೂ ಮದನ್ ಬೆಳ್ಳಿಸಾಲು ಸಾಹಿತ್ಯ ರಚಿಸಿದ್ದಾರೆ. 

ಅದರ ರೆಕಾರ್ಡಿಂಗ್ ಮುಗಿಸಿದ ಖುಷಿಯನ್ನು ಹಂಚಿಕೊಂಡಿರುವ ಪೃಥ್ವಿ ಇದೇ ಮೊದಲ ಬಾರಿಗೆ ಸಿನಿಮಾಗೆ ಹಾಡಿದ್ದೇನೆ. ಈ ಮೂಲಕ ನನ್ನ ಬಹುದಿನಗಳ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಜಾಹೀರಾತು ಲೋಕದಲ್ಲಿ ಖ್ಯಾತಿ ಗಳಿಸಿಕೊಂಡಿರುವ ಮಲಯಾಳಂ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಾಬು ಅಲೋಷಿಯಸ್ ಜಂಟಿಯಾಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫ್ರೈಡೆ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, 'ಮಮ್ಮಿ' ಮತ್ತು 'ದೇವಕಿ' ಸಿನಿಮಾ ನಿರ್ದೇಶಿಸಿದ್ದ  ಲೋಹಿತ್ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು; Video

INS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video

'ಕರಾವಳಿ' ವಿವಾದ: ಸುದೀರ್ಘ ಪೋಸ್ಟ್ ಹಾಕಿ, ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್ ಹಂಚಿಕೊಂಡ ಪ್ರಜ್ವಲ್ ದೇವರಾಜ್!

ಸರ್ಕಾರ ಉರುಳಿಸಲು BJP ಕುದುರೆ ವ್ಯಾಪಾರ; ಒಬ್ಬ ಶಾಸಕನಿಗೆ ಬರೋಬ್ಬರಿ 20-30 ಕೋಟಿ ರೂ ಆಫರ್: ಸಿಎಂ ಒಮರ್ ಅಬ್ದುಲ್ಲಾ ಆರೋಪ

EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆಚ್ಚುವರಿ ಆಸ್ತಿಗಳ ಮುಟ್ಟುಗೋಲು!