ಸಿನಿಮಾ ಸುದ್ದಿ

'ಮಾಲ್ಗುಡಿ ಡೇಸ್' ಮನುಷ್ಯನ ಬಗ್ಗೆ ಹೇಳುವ ಕಥಾನಕ: ನಟ ವಿಜಯ್ ರಾಘವೇಂದ್ರ

Raghavendra Adiga

ಆರ್ ಕೆ ನಾರಾಯಣ್ ಅವರ ಕಥಾ ಸಂಕಲನ ಆಧಾರಿತವಾಗಿ ಶಂಕರ್ ನಾಗ್ ನಿರ್ಮಿಸಿದ್ದ ಟಿವಿ ಧಾರಾವಾಹಿ  ‘ಮಾಲ್ಗುಡಿ ಡೇಸ್’ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ , ‘ಮಾಲ್ಗುಡಿ ಡೇಸ್’ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತಯಾರಾಗಿದ್ದು ನಾಳೆ (ಫೆ.೭) ಕ್ಕೆ ತೆರೆ ಕಾಣಲಿದೆ. ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ ರಾಘವೇಂದ್ರ ಒಳಗೊಂಡ ಚಿತ್ರವು ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರವಾಗಿದೆ. ದರಲ್ಲಿ ನಟನು ಎರಡು ಶೇಡ್ ಗಳಲ್ಲಿ ಕಾಣಿಸಿದ್ದಾರೆ.  ಲಕ್ಷ್ಮಿ ನಾರಾಯಣ ಮಾಲ್ಗುಡಿ ಎಂಬ ಹಿರಿಯ ಬರಹಗಾರನಾಗಿ ಹಾಗೂ ಹರೆಯದ ಶಾಲಾ ವಿದ್ಯಾರ್ಥಿಯಾಗಿ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.

ಮಾಲ್ಗುಡಿ ಡೇಸ್ ಗೆ ನಮ್ಮ ನಿಜ ಜೀವನದ ಅನೇಕ ಲಿಂಕುಗಳಿದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದ್ದಾರೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರ ಜೀವನದ ಪ್ರತಿಯೊಂದು ಹಂತದಲ್ಲೂ ಮನುಷ್ಯನಾಗುವುದು ಹೇಗೆಂದು ಹೇಳಲಿದೆ.ಬರಹಗಾರನಾಗಿ, ಲಕ್ಷ್ಮಿ ನಾರಾಯಣ ಮಾಲ್ಗುಡಿ, ಹೆಚ್ಚಿನ ಸಮಯ, ತನ್ನ ಗತಕಾಲದ ನೆನಪಿನಲ್ಲಿರುತ್ತಾನೆ. , ಅಲ್ಲಿ ಅವನು ತನ್ನ ಜೀವನದ ಬಾಲ್ಯದ ದಿನವನ್ನು ಆನಂದಿಸುತ್ತಾನೆ ಬರಹಗಾರನ ಪಾತ್ರ ನಿರ್ವಹಣೆ ಕಠಿಣ ಸವಾಲಾಗಿತ್ತು ಎಂದು ನಟ ಒಪ್ಪಿಕೊಳ್ಳುತ್ತಾರೆ.

ನನ್ನದೇ ಆದ ಲಿಂಕಿಂಗ್ ಸ್ಟೇಜ್ ಗಳನ್ನು ಹೊಂದಿದ್ದರಿಂದ ಶಾಲಾ ಬಾಲಕನ ಪಾತ್ರ ನಿರ್ವಹಣೆ ಸುಲಭವಿತ್ತು. ಆದರೆ ಬರಹಗಾರನ ಪಾತ್ರಕ್ಕೆ ನಾನು ನನ್ನ ತಂದೆ, ಡಾ. ರಾಜ್‌ಕುಮಾರ್  ಅವರಂತಹಾ ವ್ಯಕ್ತಿಗಳ ರೆಫರೆನ್ಸ್ ಪಡೆದುಕೊಳ್ಲಬೇಕಾಗಿತ್ತು.

”70 ವರ್ಷದವನಂತೆ ಕಾಣಲು ವಿಜಯ ರಾಘವೇಂದ್ರ ಪ್ರಾಸ್ಥೆಟಿಕ್ ಮೇಕ್ಅಪ್ ಹಾಕಬೇಕಾಗಿತ್ತು, ಇದನ್ನು ರೋಶನ್ ಜಿ ಮಾಡಿದ್ದರು. ಚಿತ್ರದಲ್ಲಿ ಅವರು ನಿರ್ವಹಿಸುವ ಕಾಲ್ಪನಿಕ ಪಾತ್ರವಾದ ಲಕ್ಷ್ಮಿ ನಾರಾಯಣ ಮಾಲ್ಗುಡಿಯ ಪ್ರಯಾಣವು ನಾವೆಲ್ಲರೂ ನಮ್ಮ ಜೀವನದಲ್ಲಿ ಕೆಲ ಹಂತಗಳಲ್ಲಿ ಅನುಭವಿಸುತ್ತೇವೆ. ನಾವು ನಮ್ಮ ನಿಜಜೀವನದ ಜಂಜಾಟದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ಅದು ನ್ಬಿಜವಲ್ಲ ನಮ್ಮ ಬಳಿ ಎಲ್ಲಾ ಇದೆ ಅದರಲ್ಲಿ ನಮಗೆ ಬೇಕಾಗಿರುವುದು ಒಳ್ಳೆಯದನ್ನು ಅಗೆದು ತೆಗೆಯುವುದು. ಮಾಲ್ಗುಡಿ ಡೇಸ್ ಮೂಲಕ ನಾನು ಹಾಗೂ ಚಿತ್ರತಂಡ ಹೇಳಲು ಹೊರಟಿರುವುದು ಸಹ ಇದನ್ನೇ ಆಗಿದೆ.”ಎಂದು ವಿಜಯ ರಾಘವೇಂದ್ರ ಹೇಳಿದ್ದಾರೆ.

SCROLL FOR NEXT