ದಿ ಕ್ಯಾಸಿನೋ ವೆಬ್ ಸಿರೀಸ್ ನಲ್ಲಿ ಐಂದ್ರಿತಾ ರೇ
ಪ್ರಸಿದ್ಧ ಕನ್ನಡ ನಟಿ ಗ್ಲಾಮರ್ ಬೊಂಬೆ ಐಂದ್ರಿತಾ ರೇ ಜೀ 5 ನಲ್ಲಿ ಪ್ರಸಾರವಾಗುವ ದಿ ಕ್ಯಾಸಿನೋ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.
ಪ್ರಸಿದ್ಧ ಕನ್ನಡ ನಟಿ ಗ್ಲಾಮರ್ ಬೊಂಬೆ ಐಂದ್ರಿತಾ ರೇ ಜೀ 5 ನಲ್ಲಿ ಪ್ರಸಾರವಾಗುವ ದಿ ಕ್ಯಾಸಿನೋ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.
ಹಾರ್ಧಿಕ್ ಗಜ್ಜಾರ್ ದಿ ಕ್ಯಾಸಿನೋ ಮೈ ಗೇಮ್ ಮೈ ರೂಲ್ಸ್ ವೆಬ್ ಸಿರೀಸ್ ನಿರ್ದೇಶನ ಮಾಡುತ್ತಿದ್ದಾರೆ, ಈ ವೆಬ್ ಸಿರೀಸ್ ನಲ್ಲಿ ಐಂದ್ರಿತಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಇವರ ಜೊತೆಗೆ ಕರ್ನವೀರ್ ಬೊಹ್ರಾ, ಸುದಾಂಶು ಪಾಂಡೆ ಮತ್ತು ಮಂದಾನ ಕರಿಮಿ ಕೂಡ ನಟಿಸಿದ್ದಾರೆ. 10 ಎಪಿಸೋಡ್ ಗಳಲ್ಲಿ ರಹಸ್ಯ ಮತ್ತು ಶ್ರೀಮಂತನ ವಿರುದ್ಧ ನಡೆಯುವ ಪಿತೂರಿ ಕುರಿತ ಕಥೆ ಇದಾಗಿದೆ.
1 ತಿಂಗಳ ಕಾಲದ ಶೂಟಿಂಗ್ ನಲ್ಲಿ ಭಾಗವಹಿಸುತ್ತಿರುವ ಐಂದ್ರಿತಾ ಸದ್ಯ ನೇಪಾಳದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ, ದಿ ಕ್ಯಾಸಿನೋ ಏಪ್ರಿಲ್ 10 ರಿಂದ ಆರಂಭವಾಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.