ಸಿನಿಮಾ ಸುದ್ದಿ

'ಜಾನು 'ಚಿತ್ರ ನೋಡುತ್ತಲೇ ಹೃದಯಾಘಾತ, ಚಿತ್ರಮಂದಿರದಲ್ಲೇ ಪ್ರಾಣಬಿಟ್ಟ ಸಮಂತಾ ಅಭಿಮಾನಿ

ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿನಯದ "ಜಾನು" ಚಿತ್ರ ನೋಡುತ್ತಿದ್ದ ಪ್ರೇಕ್ಷಕನೊಬ್ಬ ಚಿತ್ರವೀಕ್ಷಣೆ ನಡುವೆಯೇ ಥಿಯೇಟರ್ ನಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ. 

ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿನಯದ "ಜಾನು" ಚಿತ್ರ ನೋಡುತ್ತಿದ್ದ ಪ್ರೇಕ್ಷಕನೊಬ್ಬ ಚಿತ್ರವೀಕ್ಷಣೆ ನಡುವೆಯೇ ಥಿಯೇಟರ್ ನಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ.

ವಿವರಗಳ ಪ್ರಕಾರ 50 ವರ್ಷದ ಆಸುಪಾಸಿನವನಾಗಿದ್ದ ವ್ಯಕ್ತಿ ನಿನ್ನೆ ಸಂಜೆ ಶರ್ವಾನಂದ್ ಸಮಂತಾ  ಚಿತ್ರ "ಜಾನು" ವೀಕ್ಷಣೆಗಾಗಿ ಎರ್ರಗಡ್ಡದಲ್ಲಿರುವ ಗೋಕುಲ್ ಥಿಯೇಟರ್‌ಗೆ ಭೇಟಿ ನೀಡಿದ್ದರು. ಆದರೆ ಚಿತ್ರವೀಕ್ಷಣೆ ಬಳಿಕ ಎಲ್ಲರೂ ಚಿತ್ರಮಂದಿರದಿಂದ ಎದ್ದು ಹೊರಬಂದರೂ ಕೂಡ ಆ ವ್ಯಕ್ತಿ ಆಸನದಲ್ಲಿಯೇ ಕುಳಿತಿದ್ದರು. ಎಷ್ಟು ಬಾರಿ ಕರೆದರೂ ಕುರ್ಚಿ ಬಿಟ್ಟು ಚಲಿಸದ ವ್ಯಕ್ತಿಯನ್ನು ಕಂಡ , ಥಿಯೇಟರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೋಲೀಸರು ವ್ಯಕ್ತಿ ಮೃತಪಟ್ಟಿದ್ದಾನೆಂದು ಘೋಷಿಸಿದರು.

ಎಸ್‌ಐ ಮಹೇಂದರ್ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಪ್ರದರ್ಶನದ ಸಮಯದಲ್ಲಿ ಈ ವ್ಯಕ್ತಿ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರುಭಾವಿಸಿದ್ದಾರೆ. ಆದರೆ ಯಾವುದೇ ಕೊಲೆ ಪ್ರಯತ್ನವನ್ನೂ ತಳ್ಳಿ ಹಾಕಿಲ್ಲದ ಪೋಲೀಸರು  ಅನುಮಾನಾಸ್ಪದ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!