ಸಿನಿಮಾ ಸುದ್ದಿ

ನಾನು, ನನ್ನದು, ಬಿಟ್ಟು ಹೊಸಬರಿಗೆ ಸ್ಟಾರ್ ನಟರ ಪ್ರೋತ್ಸಾಹ: ಚಿತ್ರೋದ್ಯಮಕ್ಕೆ ಸ್ಯಾಂಡಲ್‏ವುಡ್ ಮಾದರಿ!

Shilpa D

ಹೊಸಬರ ಹೊಸ ಸಿನಿಮಾಗಳಿಗೆ ಸ್ಟಾರ್ ನಟರುಗಳು ನೀಡಿದ ಪ್ರೋತ್ಸಾಹ ಹಾಗೂ ಸಹಕಾರದಿಂದಾಗಿ ಕಳೆದ ಎರಡು ವಾರಗಳಲ್ಲಿ ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. 

ಕನ್ನಡದ ಹಲವು ಸ್ಟಾರ್ ನಟರುಗಳು ತಮ್ಮದೇ ಸಿನಿಮಾ ಎಂಬ ರೀತಿಯಲ್ಲಿ ನಟರುಗಳಾದ ದರ್ಶನ್, ಪುನೀತ್, ಯಶ್, ಸುದೀಪ್, ಶ್ರೀಮುರುಳಿ, ರಕ್ಷಿತ್ ಶೆಟ್ಟಿ ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಅವರ ಜೆಂಟಲ್ ಮ್ಯಾನ್, ಲವ್ ಮಾಕ್ಟೈಲ್, ದಿಯಾ ಸಿನಿಮಾಗಳಿಗೆ ಪುನೀತ್, ಯಶ್, ಶ್ರೀಮುರುಳಿ ಮತ್ತು ರಕ್ಷಿತ್ ಶೆಟ್ಟಿ ಗುಡ್ ಲಕ್ ಹೇಳಿ ಯಶಸ್ವಿ ಕಾಣಲಿ ಎಂದು ಹರಸಿ ಹಾರೈಸಿದ್ದಾರೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್​ಮ್ಯಾನ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ದರ್ಶನ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಡಿ ಬಾಸ್ ಕನ್ನಡ ಚಿತ್ರರಂಗದ ಕೆಲವು ವಿಚಾರಗಳ ಬಗ್ಗೆ ಬೇಸರ ಹೊರಹಾಕಿದ್ದರು. ಒಂದು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಆದರೆ ಪರಭಾಷೆಯಲ್ಲಿ ಆಗಿದ್ರೆ ಕನ್ನಡದವರು ಸೇರಿ ಬೆನ್ನು ತಟ್ಟಿ, ಚಪ್ಪಾಳೆ ತಟ್ಟಿ ಜೊತೆಗೆ ದುಡ್ಡು ಕೊಟ್ಟು ಕಳುಹಿಸುತ್ತೇವೆ ಎಂದರ. ನಿಜವಾಗಿಯೂ ಅಸಹ್ಯವಾಗುತ್ತದೆ. ನಾವು ಹೆಮ್ಮೆಯಿಂದ ಕನ್ನಡದವರು ಎಂದು ಹೇಳುತ್ತೇವೆ. ಆದರೆ ನಾವು ಏನೂ ಮಾಡಲ್ಲ. ಈಕಡೆ ಆಕಡೆಯವರನ್ನು ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟು ಬಿಡುತ್ತೇವೆ. ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದರು.

ಅಂತೂ ಲವ್‌ ಮಾಕ್ಟೇಲ್ ಚಿತ್ರ ಚೆನ್ನಾಗಿ ಓಡುತ್ತಿದೆ ಅನ್ನೋದನ್ನ ಕೇಳಿ ಖುಷಿಯಾಗ್ತಿದೆ. ಒಂದು ಒಳ್ಳೆ ಸಿನಿಮಾಗೆ ಸಿಗಬೇಕಾದ ಸ್ಪಂದನೆ ಹಾಗೂ ಹಣ ಬರದಿದ್ದನ್ನ ಕಂಡು ನಿಜಕ್ಕೂ ಬೇಜಾರಾಗಿತ್ತು. ನಾನಂತೂ ಸಿನಿಮಾದ ಪ್ರತಿ ಅಂಶವನ್ನೂ ಇಷ್ಟ ಪಟ್ಟಿದ್ದೇನೆ. ಈಗ ಎಲ್ಲರೂ ಸಿನಿಮಾನ ಹೋಗಿ ನೋಡಲಿ ಅಂತಾ ಎದುರು ನೋಡ್ತಿದ್ದೀನಿ. ನಿನ್ ಜೊತೆ ನಾನಿದ್ದೀನಿ ಗೆಳೆಯ ಕೃಷ್ಣ ‘ ಎಂದು ಸುದೀಪ್  ಟ್ವೀಟ್ ಮಾಡಿದ್ದಾರೆ.

ರಕ್ಷಿತ್‌ ಶೆಟ್ಟಿಯವರ ಫೋಟೋ ಬದಲಿಗೆ ಅಲ್ಲಿ, 'ದಿಯಾ' ಸಿನಿಮಾದ ಪೋಸ್ಟರ್‌ ರಾರಾಜಿಸುತ್ತಿದೆ. ಇತ್ತೀಚೆಗಷ್ಟೇ ಅವರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಈ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರೂ ಚಿತ್ರವನ್ನು ನೋಡಿ ಬೆಂಬಲಿಸಿ ಎಂದು ವಿನಂತಿ ಕೂಡ ಮಾಡಿಕೊಂಡಿದ್ದಾರೆ. 

ಇದು ಪ್ರಯೋಗಾತ್ಮಕ ಚಿತ್ರ ಅಲ್ಲ. ಒಳ್ಳೆಯ ಲವ್‌ ಸ್ಟೋರಿ ಇದೆ. ಎಲ್ಲರೂ ಥಿಯೇಟರ್‌ಗೆ ಬಂದು ನೋಡುವಂತಹ ಸಿನಿಮಾ. ಇಂಥ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ಮೊದಲು ಧನ್ಯವಾದ ಹೇಳಬೇಕು. ನಿರ್ದೇಶಕರು ಕೂಡ ತುಂಬ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕಲಾವಿದರ ನಟನೆಯೂ ಸೂಪರ್‌. ಹೇಳೋಕೆ ಶಬ್ಧಗಳೇ ಸಿಗುತ್ತಿಲ್ಲ. ನಾನು ಎಲ್ಲರಿಗೂ ಕೇಳಿಕೊಳ್ಳುವುದು ಇಷ್ಟೇ. ಎಲ್ಲರೂ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ. ಒಳ್ಳೊಳೆಯ ಸಿನಿಮಾಗೆ ನಷ್ಟವಾದರೆ, ಮತ್ತೆ ಇಂಥ ಒಳ್ಳೆಯ ಸಿನಿಮಾವನ್ನು ಮಾಡಲು ಬೇರೆಯವರು ಭಯಪಡುತ್ತಾರೆ. ಈ ನಿರ್ದೇಶಕರು ಇದಕ್ಕಿಂತಲೂ ಇನ್ನೊಂದು ದೊಡ್ಡ ಚಿತ್ರ ಮಾಡಬೇಕು ಎಂದರೆ ದಿಯಾ ಗೆಲ್ಲಲೇಬೇಕು' ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

SCROLL FOR NEXT