ರಾಬರ್ಟ್ ಪೋಸ್ಟರ್ 
ಸಿನಿಮಾ ಸುದ್ದಿ

ದರ್ಶನ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್: ಫೆಬ್ರವರಿ 16 ರಂದು ರಾಬರ್ಟ್​ ಟೀಸರ್ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿಗೆ  ಪೆಬ್ರವರಿ 16 ಸಂಭ್ರಮದ ದಿನ.  ಅಂದು ದರ್ಶನ್​ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲು ಫ್ಯಾನ್ಸ್​  ವರ್ಷವಿಡೀ ಕಾಯುತ್ತಾ ಪ್ಲಾನ್​ ಮಾಡುತ್ತಿರುತ್ತಾರೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿಗೆ  ಪೆಬ್ರವರಿ 16 ಸಂಭ್ರಮದ ದಿನ.  ಅಂದು ದರ್ಶನ್​ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲು ಫ್ಯಾನ್ಸ್​  ವರ್ಷವಿಡೀ ಕಾಯುತ್ತಾ ಪ್ಲಾನ್​ ಮಾಡುತ್ತಿರುತ್ತಾರೆ. 

ಅದರಂತೆ ದರ್ಶನ್​ ಸಹ ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡೋದಿಲ್ಲ. ಅದಕ್ಕೆ ಈ ಸಲವೂ ಅವರು ಅಭಿಮಾನಿಗಳಿಗಾಗಿ ಅಂದು ಒಂದು ಭರ್ಜರಿ ಉಡುಗೊರೆ ಕೊಡಲಿದ್ದಾರೆ.

ದರ್ಶನ್​ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಒಂದು ಕಡೆ ಜೋರಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನೆಚ್ಚಿನ ಡಿಬಾಸ್​ಗೆ ಅಂದು ಯಾವ ರೀತಿಯ ಉಡುಗೊರೆ ಹಾಗೂ ಏನೇನು ಕೊಡಬೇಕು ಅಂತ ಫ್ಯಾನ್ಸ್​ ತಲೆಕೆಡಿಸಿಕೊಂಡಿದ್ದಾರೆ. ಅಂತೆಯೇ ದರ್ಶನ್​ ಸಹ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್​ ಗಿಫ್ಟ್​ ಕೊಡೋಕೆ ಸಜ್ಜಾಗಿದ್ದಾರೆ.

ದರ್ಶನ್​ ಅವರ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್​' ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ ಸಿನಿಮಾದ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ.

ದರ್ಶನ್​ 'ರಾಬರ್ಟ್'​ ಆಗಿ ಕಾಣಿಸಿಕೊಳ್ಳಲಿರುವ ಚಿತ್ರದ ಟೀಸರ್​, ಡಿಬಾಸ್​ ಹುಟ್ಟುಹಬ್ಬದಂದು ಮಧ್ಯರಾತ್ರಿ 12 ಗಂಟೆಗೆ ಟೀಸರ್​ ಬಿಡುಗಡೆಗೆ ಸಮಯ ನಿಗದಿ ಮಾಡಲಾಗಿದೆ. ಹೀಗೆಂದು ನಿರ್ದೇಶಕ ತರುಣ್​ ಸುಧೀರ್​ ಟ್ವೀಟ್​ ಮಾಡಿದ್ದಾರೆ. ರಾಬರ್ಟ್ ಸಿನಿಮಾ ಏಪ್ರಿಲ್ ರಂದು ರಿಲೀಸ್ ಆಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!