ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್‌ಜತೆಗೆ ಸ್ಯಾಂಡಲ್‌ವುಡ್‌ನಲ್ಲಿ ನಟಿಸುತ್ತಿರುವುದು ಥ್ರಿಲ್ ನೀಡಿದೆ: ಸುರಭಿ

ಯೋಗರಾಜ್ ಭಟ್ ಅವರ ಗಾಳಿಪಟ  2 ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಸಮಯದಲ್ಲಿ  ಸುನಿ ನಿರ್ದೇಶನದ ಚಿತ್ರದಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.ಸುಪ್ರೀತ್ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 24 ರಂದು ಸೆಟ್ಟೇರಲಿದೆ.ಇದಕ್ಕೆ ಮುನ್ನ ನಿರ್ಮಾಪಕರು ಮಹೂರ್ತ ನೆರವೇರಿಸಲು ಯೋಜಿಸಿದ್ದಾರೆ.. ಇನ್ನೂ ಹೆಸರಿಡಲಾಗಿರುವ ಈ ಚಿತ್ರದಲ್ಲಿ ಸುರಭಿ ನಾಯಕಿಯಾಗಿ ಕಾ

ಯೋಗರಾಜ್ ಭಟ್ ಅವರ ಗಾಳಿಪಟ  2 ಶೂಟಿಂಗ್ ನಲ್ಲಿ ತೊಡಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಸಮಯದಲ್ಲಿ  ಸುನಿ ನಿರ್ದೇಶನದ ಚಿತ್ರದಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.ಸುಪ್ರೀತ್ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 24 ರಂದು ಸೆಟ್ಟೇರಲಿದೆ.ಇದಕ್ಕೆ ಮುನ್ನ ನಿರ್ಮಾಪಕರು ಮಹೂರ್ತ ನೆರವೇರಿಸಲು ಯೋಜಿಸಿದ್ದಾರೆ.. ಇನ್ನೂ ಹೆಸರಿಡಲಾಗಿರುವ ಈ ಚಿತ್ರದಲ್ಲಿ ಸುರಭಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಜನಪ್ರಿಯರಾಗಿರುವ ಈಕೆ ಧನುಷ್ ಅವರ ವೆಲೈಯಿಲ್ಲಾ ಪಟ್ಟಾಥಾರಿ ನಿಂದಾಗಿ ಹೆಸರಾಗಿದ್ದರು. ಇದೀಗ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿರುವುದಕ್ಕೆ ನಟಿ ಉತ್ಸುಕರಾಗಿದ್ದು , "ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಇದು ಒಂದು ಸುವರ್ಣಾವಕಾಶ, ನನಗೆ ಕನ್ನಡದಲ್ಲಿ ಹೊಸತಾಗಿ ಕಾಣಿಸಲು  ಸರಿಯಾದ ಸಮಯ ಮತ್ತು ಅವಕಾ ಇದೆಂದು ನಾನು ಭಾವಿಸುತ್ತೇನೆ ಹೊಸದನ್ನು ಕಲಿಯಲು ಎದುರು ನೋಡುವ ನಾನು ಕನ್ನಡಕ್ಕೆ ಕರೆತಂದ  ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಸುಪ್ರೀತ್  ಗೆ ಕೃತಜ್ಞಳಾಗಿದ್ದೇನೆ" ಎಂದರು.

ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿದ ಚಮಕ್  ನಟ  ಮತ್ತು ನಿರ್ದೇಶಕ ಜೋಡಿ ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಡ್ರಾಮಾಗಾಗಿ  ಒಟ್ಟಿಗೆ ಸೇರುತ್ತಿದ್ದಾರೆ, ಇದು ಇಂದಿನ ರಿಯಾಲಿಟಿ ಶೋ ಮತ್ತು ನ್ಯಾಯಾಲಯದ ಪ್ರಕರಣದ ಸುತ್ತ ಸುತ್ತುವ ಕಥನವಾಗಿರಲಿದೆ

ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ರಾಯ್ ಪಥಾಜೆ  ಛಾಯಾಗ್ರಹಣ ಈ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!