ಬೇರ್ ಗ್ರಿಲ್ಸ್ ಜೊತೆಗೆ ರಜನಿ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಟೀಸರ್ ಬಿಡುಗಡೆ
ಡಿಸ್ಕವರಿ ವಾಹಿನಿಯ 'ಮ್ಯಾನ್ ವರ್ಸಸ್ ವೈಲ್ಡ್' ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸೂಪರ್ ಸ್ಟಾರ್ ರಜನಿ ಕಾಂತ್ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಕಾರ್ಯಕ್ರಮದ ಟೀಸರ್ ಬಿಡುಗಡೆ ಆಗಿದೆ.
ನವದೆಹಲಿ: ಡಿಸ್ಕವರಿ ವಾಹಿನಿಯ 'ಮ್ಯಾನ್ ವರ್ಸಸ್ ವೈಲ್ಡ್' ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸೂಪರ್ ಸ್ಟಾರ್ ರಜನಿ ಕಾಂತ್ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಕಾರ್ಯಕ್ರಮದ ಟೀಸರ್ ಬಿಡುಗಡೆ ಆಗಿದೆ.
'ಇಂಟು ದಿ ವೈಲ್ಡ್ ' ಕಾರ್ಯಕ್ರಮ ಮಾರ್ಚ್ 23 ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. 40 ಸೆಕೆಂಡ್ ಗಳ ಈ ಟೀಸರ್ ನಲ್ಲಿ ರಜನಿಕಾಂತ್ , ಬೇರ್ ಗ್ರಿಲ್ಸ್ ಜೊತೆಗೆ ಬಂಡೀಪುರದಲ್ಲಿನ ಜಿಂಕೆಗಳು, ಹುಲಿಗಳು, ಆನೆಗಳನ್ನು ಕಾಣಬಹುದಾಗಿದೆ.
ಜಲಸಂರಕ್ಷಣೆಯ ಸಂದೇಶವನ್ನು ದೇಶದ ಜನತೆಗೆ ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕೂಡಾ ಗ್ರಿಲ್ಸ್ ಜೊತೆಗೆ ಉತ್ತರಾ ಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಭರ್ಜಿ ಹಿಡಿದು ಹೆಜ್ಜೆ ಹಾಕಿದ್ದರು. ವಿಶ್ವದ 180 ದೇಶಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.