ಜಂಟಲ್ ಮ್ಯಾನ್ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಡಿಮ್ಯಾಂಡ್
ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಜನವರಿ 31ರಂದು ರಿಲೀಸ್ ಆಗಲಿದೆ, ರಿಲೀಸ್ ಗು ಮನ್ನವೇ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಜನವರಿ 31ರಂದು ರಿಲೀಸ್ ಆಗಲಿದೆ, ರಿಲೀಸ್ ಗು ಮನ್ನವೇ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ಕಳೆದ ವಾರವಷ್ಟೇ ಜಂಟಲ್ ಮ್ಯಾನ್ ಟ್ರೇಲರ್ ರಿಲೀಸ್ ಆಗಿದ್ದು, ಹಲವರ ಗಮನ ಸೆಳೆದಿದೆ, ಹೀಗಾಗಿ ತೆಲುಗು ಮತ್ತು ತಮಿಳು ನಿರ್ಮಾಪಕರು ರಿಮೇಕ್ ರೈಟ್ಸ್ ಗಾಗಿ ಮುಗಿಬಿದ್ದಿದ್ದಾರೆ. ನಟ ಸಾಯಿಕುಮಾರ್, ಮ್ಯಾನೇಜರ್ ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಮಾಡಲು ರಿಮೇಕ್ ರೈಟ್ಸ್ ಗಾಗಿ ಕೇಳುತ್ತಿದ್ದಾರೆ.
ಜಂಟಲ್ ಮ್ಯಾನ್ ಕಥೆ ನಮಗೆ ತುಂಬಾ ಇಷ್ಟವಾಗಿದೆ ಎಂದು ಸಾಯಿಕುಮಾರ್ ತಿಳಿಸಿದ್ದಾರೆ, ಸಂಕ್ರಾಂತಿ ನಂತರ ತೆಲುಗಿನಲ್ಲಿ ರಿಮೇಕ್ ಮಾಡಲಾಗುತ್ತದೆ. ತಮಿಳಿನಲ್ಲಿ ವಿಶಾಲ್ ರಿಮೇಕ್ ರೈಟ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ದಿನಕ್ಕೆ 18 ಗಂಟೆ ನಿದ್ದೆ ಮಾಡುವವರ ಕುರಿತ ಸ್ಟೋರಿ ಇದಾಗಿದೆ. ಜೊತೆಗೆ ಮಾಫಿಯಾ ಕುರಿತ ಕಥೆ ಇದಾಗಿದೆ. ಇದರ ಜೊತೆಗೆ ಇತರ ನಿರ್ಮಾಪಕರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ.
ಜಬೇಶ್ ಕುಮಾರ್ ಜಂಟಲ್ ಮ್ಯಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಡ್ರಗ್ ಮಾಫಿಯಾ ಸಂಬಂಧಿಸಿದ ಕತೆಯನ್ನೊಳಗೊಂಡಿದೆ. ನಿಶ್ವಿಕಾ ನಾಯ್ಡು ಮತ್ತು ಸಂಚಾರಿ ವಿಜಯ್ ಕೂಡ ಅಭಿನಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.