ಸಿನಿಮಾ ಸುದ್ದಿ

ಸ್ಯಾಂಡಲ್‌ವುಡ್‌ನ ಹಿರಿಯ ಮೇಕಪ್ ಕಲಾವಿದ ಕೃಷ್ಣ ನಿಧನ

Vishwanath S

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಮೇಕಪ್ ಕಲಾವಿದ ಕೃಷ್ಣ(55) ವಿಧಿವಶರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ದೂರದರ್ಶನಕ್ಕಾಗಿ ಡಾ. ರಾಜ್ ಕುಮಾರ್ ಅವರ ಸಂದರ್ಶನವನ್ನು ಮಾಡಿದ್ದ ಅವರು ಸುಮಾರು 200ಕ್ಕೂ ಅಧಿಕ ಚಿತ್ರಗಳಿಗೆ ಮೇಕಪ್‍ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ.

ಮೇಕಪ್ ಕೃಷ್ಣ ಎಂದೇ ಹೆಸರಾಗಿದ್ದ ಅವರು, ಬಾಲಿವುಡ್ ಕಲಾವಿದರಿಗೂ ಮೇಕಪ್ ಮಾಡಿ ಸೈ ಎನಿಸಿಕೊಂಡಿದ್ದರು.

SCROLL FOR NEXT