ನಮೋ ಚಿತ್ರದ ಏಳು ಹಾಡುಗಳ ಗುಚ್ಚ ಬಿಡುಗಡೆ
ಹೊಸಬರೆ ಸೇರಿ ಮಾಡಿರುವ ನಮೋ ಚಿತ್ರ ಶೀರ್ಷಿಕೆ ಮೂಲಕವೇ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇನ್ನು ಚಿತ್ರದ ಟೀಸರ್, ಹಾಡುಗಳ ಬಿಡುಗಡೆ ನಂತರ ಇದೀಗ ಒಟ್ಟಾರೆ ಏಳು ಹಾಡುಗಳ ಜ್ಯೂಕ್ ಬಾಕ್ಸ್ ಅನ್ನು ಚಿತ್ರ ತಂಡ ರಿಲೀಸ್ ಮಾಡಿದೆ.
ಹೊಸಬರೆ ಸೇರಿ ಮಾಡಿರುವ ನಮೋ ಚಿತ್ರ ಶೀರ್ಷಿಕೆ ಮೂಲಕವೇ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇನ್ನು ಚಿತ್ರದ ಟೀಸರ್, ಹಾಡುಗಳ ಬಿಡುಗಡೆ ನಂತರ ಇದೀಗ ಒಟ್ಟಾರೆ ಏಳು ಹಾಡುಗಳ ಗುಚ್ಛವನ್ನು ಚಿತ್ರ ತಂಡ ರಿಲೀಸ್ ಮಾಡಿದೆ.
ನಮೋ ಅಂದಾಕ್ಷಣ ಇದು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಧಾರಿತ ಚಿತ್ರವೇ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲ ಮೋದಿಗೂ ಈ ನಮೋ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕಡಿಮೆ ಸಮಯದಲ್ಲಿ ಶ್ರೀಮಂತನಾಗುವುದಕ್ಕೆ ಹೊರಡುವ ಯುವಕರ ತಂಡದ ಕಥೆ ಇದು.
ಚಿತ್ರಕ್ಕೆ ಸಾಯಿ ಸರ್ವೇಶ್ ಸಂಗೀತ ಸಂಯೋಜಿಸಿದ್ದು ಚಿತ್ರವನ್ನು ನಿರ್ದೇಶಿಸಿರುವ ಪುಟ್ಟರಾಜ್ ಸ್ವಾಮಿ ಅವರೇ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಶ್ಮಿತಾ, ಭೈರವ, ಮಣಿ, ಮಹೇಶ್ ಅಭಿನಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.