ಸಿನಿಮಾ ಸುದ್ದಿ

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತಡೇ ಸಂಭ್ರಮ, ಪತ್ನಿ, ಆಪ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ

Raghavendra Adiga

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು (ಜುಲಯ್ 12) 58ನೇ ಬರ್ತಡೇ ಸಂಭ್ರಮ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ನಟ ಈ ಬಾರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. 

ಪತ್ನಿ, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಶಿವಣ್ನ ಹುಟ್ಟುಹಬ್ಬ ಆಚರಿಸಿದ್ದಾರೆ. ಇನ್ನು ಕಳೆದ ವರ್ಷ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಿವರಾಜ್ ಕುಮಾರ್ ತಮ್ಮ ಜನ್ಮದಿನ ಆಚರಸಿಸಿಕೊಂಡಿರಲಿಲ್ಲ.

ಕರುನಾಡ ಚಕ್ರವರ್ತ, ಸವ್ಯಸಾಚಿ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಶುಭಾಶಯ ಸಂದೇಶಗಳನ್ನು ಕಳಿಸಿ ಶುಭ ಕೋರಿದ್ದಾರೆ. 

SCROLL FOR NEXT