ಸಿನಿಮಾ ಸುದ್ದಿ

ಥಿಯೇಟರ್ ಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಾಸುವುದಿಲ್ಲ: ಪುನೀತ್ ರಾಜ್ ಕುಮಾರ್

Nagaraja AB

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ 'ಲಾ'  ಸಿನಿಮಾ ಈ ವಾರ ಬಿಡುಗಡೆಯಾಗಲಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾ ಜುಲೈ 24 ರಂದು  ಬಿಡುಗಡೆಯಾಗಲಿದೆ.ಸಿನಿಮಾ ಮತ್ತು ಚಿತ್ರ ಬಿಡುಗಡೆಯಲ್ಲಿ ಪ್ರಯೋಗ ಮಾಡಲು ಬಯಸುವವರಿಗೆ ಒಟಿಟಿ ಎಂದು ವೇದಿಕೆಯಾಗಿದೆ ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.

ಮುಂದಿನ ಎರಡು ವಾರಗಳಲ್ಲಿ  ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಎರಡು ಚಿತ್ರಗಳು ನೇರವಾಗಿ ಬಿಡುಗಡೆಯಾಗಲಿವೆ. ರಘು ಸಮರ್ಥ್ ನಿರ್ದೇಶನದ 'ಲಾ' ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸಿದರೆ ಪನ್ನಾಗಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ಡ್ಯಾನಿಶ್ ಆಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಈ ಎರಡು ಚಿತ್ರಗಳ ಮೂಲಕ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ನಿರ್ಮಾಪಕರಾಗಿದ್ದಾರೆ. ಈ ಎರಡು ಚಿತ್ರಗಳನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಬೇಕೆಂಬ ಉದ್ದೇಶದಿಂದ ನಿರ್ಮಾಣ ಮಾಡಲಾಯಿತಾದರೂ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಡಿಜಿಟಲ್ ಮಾರ್ಗದಲ್ಲಿ ಈ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಡಿಜಿಟಲ್ ವೇದಿಕೆಯಲ್ಲಿ ಚಿತ್ರ ಬಿಡುಗಡೆ ಕುರಿತಂತೆ ಮಾತನಾಡಿರುವ ಪುನೀತ್ ರಾಜ್ ಕುಮಾರ್,  ಕಳೆದ ಮೂರು, ನಾಲ್ಕು ವರ್ಷಗಳಿಂದ ಡಿಜಿಟಲ್ ವೇದಿಕೆ ಸದೃಢವಾಗಿದೆ. ಈ ಮಾರ್ಗವನ್ನು ಅನುಸರಿಸಿದವರನ್ನು ನಾನು ಮೊದಲೇನಲ್ಲ, ಏನೇ ಹೊಸ ಹೊಸ ವೇದಿಕೆ ಬಂದಿದ್ದರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಸುಕಾಗುವುದಿಲ್ಲ ಎಂದರು.

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿರುವ 'ಲಾ ಮತ್ತು ಫ್ರೆಂಚ್ ಬಿರಿಯಾನಿ ಚಿತ್ರಗಳನ್ನು ಇಡೀ ದೇಶದ ಜನ ವೀಕ್ಷಿಸಲಿದ್ದಾರೆ. ಪ್ರಯೋಗ ಮಾಡಬಯಸುವ ನಿರ್ಮಾಪಕರಿಗೆ  ಒಟಿಟಿ ಉತ್ತಮ ವೇದಿಕೆಯಾಗಿದೆ. ಈ ಎರಡು ಸಿನಿಮಾಗಳ ಬಗೆಗಿನ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇನೆ. ಕನ್ನಡ  ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವ ಅಮೆಜಾನ್ ಪ್ರೈಮ್ ವಿಡಿಯೋಗೆ ಧನ್ಯವಾದಗಳು, ಎಲ್ಲರಿಗಾಗಿ ಮುಂದೆ ಒಂದಿಷ್ಟು ಸಿನಿಮಾ ಮಾಡುವುದಾಗಿ ಪುನೀತ್ ರಾಜ್ ಕುಮಾರ್ ಹೇಳಿದರು.

ರಾಗಿಣಿ ಅವರನ್ನು ಮೊದಲ ಬಾರಿಗೆ ಪರಿಚಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಆಕೆಯ ಪತಿ ಪ್ರಜ್ವಲ್ ದೇವರಾಜ್ ನನಗೆ ಉತ್ತಮ ಸ್ನೇಹಿತರು.ಅವರ ತಂದೆ ದೇವರಾಜ್ ಗೆ ಚಿತ್ರೋದ್ಯಮದಲ್ಲಿ ಉತ್ತಮ ಹೆಸರಿದೆ.ಆ ಕುಟುಂಬದಿಂದ ಮತ್ತೊಬ್ಬರನ್ನು ಚಿತ್ರರಂಗಕ್ಕೆ   ಪರಿಚಿಯಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಡ್ಯಾನಿಶ್ ಆಲಿ ಕೂಡಾ ಉತ್ತಮ ನಟರಾಗಿದ್ದಾರೆ. ಫ್ರೆಂಚ್ ಬಿರಿಯಾನಿ ರಂಗಾಯಣ ರಘು ಕೂಡಾ ನಟಿಸಿರುವುದಾಗಿ ಪುನೀತ್ ತಿಳಿಸಿದರು.

ನಮ್ಮ ಬ್ಯಾನರ್ ಅಡಿಯಲ್ಲಿ ಬರುವ ಚಿತ್ರಗಳನ್ನು ಜನ ಮೆಚ್ಚಿಕೊಂಡರೆ ಮುಂಬರುವ ದಿನಗಳಲ್ಲಿ  ಮತ್ತಷ್ಟು ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ಪುನೀತ್ ರಾಜ್ ಕುಮಾರ್ ತಿಳಿಸಿದರು.

SCROLL FOR NEXT