ಸಿನಿಮಾ ಸುದ್ದಿ

ನಿರ್ದೇಶಕ ಸಾದ್ ಖಾನ್ 'ಸಂಗೀತ್'ಗೆ ಸಿದ್ಧತೆ

Sumana Upadhyaya

ನಿರ್ದೇಶಕ ಸಾದ್ ಖಾನ್ ಅವರ ಮುಂದಿನ ಚಿತ್ರ ರೊಮ್ಯಾಂಟಿಕ್ ಕಾಮಿಡಿ ಡ್ರಾಮವಾಗಿದ್ದು ಈ ಹಿಂದೆ ಸಾದ್ ಖಾನ್ ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್, ಸ್ಟೇಷನ್, ಲವ್, ಶಿ ಯಂತಹ ಚಿತ್ರಗಳನ್ನು ನಿರ್ದೇಶಿಸಿದವರು.

ಸಾದ್ ಖಾನ್ ಅವರ ಮುಂದಿನ ಚಿತ್ರದ ಹೆಸರು ಸಂಗೀತ್, ಮದುವೆಯೊಂದರಲ್ಲಿ ಭೇಟಿಯಾದ ಜೋಡಿಯ ನಗರ ಶೈಲಿಯ ಜೀವನದಲ್ಲಿ ಪ್ರೀತಿಯ ಆಧಾರಿತ ಕಥೆಯನ್ನು ಹೊಂದಿದೆ. ಎನ್ ಕೆ ಎಂಟರ್ಟೈನ್ ಮೆಂಟ್ ಅಡಿಯಲ್ಲಿ ಚಂದ್ರು ಮನೋಹರನ್, ನಿಖಿಲ್ ಕುಮಾರಸ್ವಾಮಿ ಅವರು ಚಿತ್ರ ತಯಾರಿಸಲಿದ್ದಾರೆ. ಸಾದ್ ಖಾನ್ ಅವರ ಫರ್ಸ್ಟಾಕ್ಷನ್ ಸ್ಟುಡಿಯೊಸ್ ಕೂಡ ಜತೆಯಲ್ಲಿ ಸೇರಿ ಸಂಗೀತ್ ಸಿನೆಮಾ ತಯಾರಿಸುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿಯವರಿಗೆ ಸಹ ಚಂದ್ರು ಮನೋಹರ್ ಚಿತ್ರವೊಂದನ್ನು ತಯಾರಿಸುತ್ತಿದ್ದು ವಿಜಯ್ ಕುಮಾರ್ ಕೊಂಡ ನಿರ್ದೇಶನದ ಕ್ರೀಡೆಗೆ ಸಂಬಂಧಿಸಿದ ಚಿತ್ರವಾಗಿದೆ. ಲಾಕ್ ಡೌನ್ ಗೆ ಮುಂಚೆಯೇ ಚಿತ್ರದ ಶೂಟಿಂಗ್ ಪ್ರಾರಂಭವಾಗಿತ್ತು.

ಸದ್ಯ ಸಾದ್ ಖಾನ್ ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸದಲ್ಲಿ ತೊಡಗಿದ್ದಾರೆ.ಚಿತ್ರಕ್ಕೆ ಹೊಸ ಪ್ರತಿಭೆಗಳನ್ನು ಹುಡುಕುವ ಕೆಲಸದಲ್ಲಿ ನಿರ್ದೇಶಕರು ತೊಡಗಿದ್ದಾರೆ. ಅದಕ್ಕಾಗಿ ಸದ್ಯದಲ್ಲಿಯೇ ಆಡಿಷನ್ ನಡೆಸಲಿದ್ದಾರಂತೆ.

SCROLL FOR NEXT