ಡಾರ್ಲಿಂಗ್ ಕೃಷ್ಣ 
ಸಿನಿಮಾ ಸುದ್ದಿ

'ಲವ್ ಮಾಕ್‌ಟೇಲ್ 2' ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಿದ್ಧ: ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ ತಮ್ಮ "ಲವ್ ಮಾಕ್‌ಟೇಲ್ " ಯಶಸ್ಸಿನ ನಂತರ ಅದರ ಮುಂದುವರಿದ ಭಾಗವನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ ತಮ್ಮ "ಲವ್ ಮಾಕ್‌ಟೇಲ್" ಯಶಸ್ಸಿನ ನಂತರ ಅದರ ಮುಂದುವರಿದ ಭಾಗವನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ.

ಆನ್-ಸ್ಕ್ರೀನ್ ರೊಮ್ಯಾಂಟಿಕ್ ಪ್ರಯಾಣವನ್ನು ಮುಂದುವರಿಸಲು ಬಯಸುವ ನಿರ್ದೇಶಕ-ನಟ, ಲವ್ ಮಾಕ್‌ಟೇಲ್ 2 ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಕಥೆ ಸಿದ್ದಪಡಿಸಿರುವ ಕೃಷ್ಣ ಇದೀಗ ಸಂಬಾಷಣೆ ಬರೆಯುವಲ್ಲಿ ತೊಡಗಿದ್ದಾರೆ."ಲವ್ ಮಾಕ್‌ಟೇಲ್ 2 ಚಿತ್ರದ ಶೂಟಿಂಗ್ ಪ್ರಾರಂಭಿಸಲು ನಾನು ಸಿದ್ಧನಿದ್ದೇನೆ" ಎಂದು ಕೃಷ್ಣ ಹೇಳುತ್ತಾರೆ, ಅವರು ಲಾಕ್‌ಡೌನ್ ಮುಗಿಯುವುದನ್ನೇ ಕಾಯುತ್ತಿದ್ದಾರೆ. 

ನಾನು ಮಹತ್ವದ ಭಾಗಗಳೊಂದಿಗೆ ಶೂಟಿಂಗ್ ಪ್ರಾರಂಭಿಸಬೇಕಿದೆ. ಇದಕ್ಕಾಗಿ  ನನಗೆ ಹೊಸ ಗೆಟಪ್ ಧರಿಸುವ ಅಗತ್ಯವಿದೆ. ಲವ್ ಮಾಕ್‌ಟೇಲ್ ಮಿಲಾನಾ ನಾಗರಾಜ್ ಮತ್ತು ಅಮೃತ ಅಯ್ಯಂಗಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದ ಚಿತ್ರವಾಗಿದ್ದು ಬಹುತೇಕ ಮೊದಲ ಭಾಗದಲ್ಲಿದ್ದ ನಟ ನಟಿಯರನ್ನೇ ಉಳಿಸಿಕೊಳ್ಲಲು ನಿರ್ದೇಶಕ ತೀರ್ಮಾನಿಸಿದ್ದಾರೆ.

ಆದರೆ ಈ ಚಿತ್ರದ ಎರಡನೇ ಭಾಗದಲ್ಲಿ ಹೊಸ ನಾಯಕಿ ಇರಲಿದ್ದು ಅವರ ಆಯ್ಕೆ ಇನ್ನೂ ನಡೆಯಬೇಕಿದೆ. ಮೊದಲ ಭಾಗವನ್ನು ಕೃಷ್ಣ ಮತ್ತು ಮಿಲಾನಾ ನಾಗರಾಜ್ ಜಂಟಿಯಾಗಿ ನಿರ್ಮಿಸಿದ್ದು ಉತ್ತರಾರ್ಧವನ್ನೂ ಇದೇ ಜೋಡಿ ನಿರ್ಮಾಣ ಮಾಡಲಿದೆ.. ರಘು ದೀಕ್ಷಿತ್ ಸಂಗೀತ ಸಂಯೋಜನೆ, ಮತ್ತು ಶ್ರೀ ಕ್ರೇಜಿಮೈಂಡ್ಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಸಿಗಲಿದೆ.

ಈ ಮಧ್ಯೆ ಕೃಷ್ಣ ನಾಗಶೇಖರ್ ನಿರ್ದೇಶನದ  ಶ್ರೀಕೃಷ್ಣ@ಜಿಮೇಲ್.ಕಾಮ್ ಚಿತ್ರದ ಚಿತ್ರೀಕರಣದಲ್ಲಿ ಸಹ ತೊಡಗಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸಿದ ಈ ಚಿತ್ರದಲ್ಲಿ ಜಾಸ್ಸಿ ಗಿಫ್ಟ್ ಸಂಗೀತವಿದ್ದರೆ ಸತ್ಯ ಹೆಗ್ಡೆ ಛಾಯಾಗ್ರಹಣವಿರಲಿದೆ.

ಇನ್ನು ಮಾನಸಾಲಜಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮೂಲ್ಯ ಸಹೋದರ ದೀಪಕ್ ಅರಸ್ ಕೃಷ್ಣ ಅವರೊಡನೆ ಸೇರಿ ಮತ್ತೊಂದು ಚಿತ್ರ ಮಾಡುವ ನಿರೀಕ್ಷೆ ಇದೆ. "ಇದು  ನನ್ನ ಪಾಲಿನ ಇನ್ನೊಂದು ರೊಮ್ಯಾಂಟಿಕ್ ಡ್ರಾಮಾ ಆಗಿರಲಿದೆ. ಇದಕ್ಕಾಗಿ ಕಥೆ ಸಿದ್ದವಾಗಿದ್ದು ಪ್ರಸ್ತುತ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕಾಗಿ ಸಂಭಾಷಣೆಗಳನ್ನು ಬರೆಯುತ್ತಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಚಿತ್ರದ ಚಿತ್ರೀಕರಣ ಪ್ರಾರಂಭಿಸುತ್ತೇನೆ” ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel