ಮಂಡ್ಯದಲ್ಲಿ ನಿಖಿಲ್ 
ಸಿನಿಮಾ ಸುದ್ದಿ

ಭಾವೀ ಪತ್ನಿ ಜೊತೆ ಶಾಪಿಂಗ್ ಇಲ್ಲಾ, ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ!

ಭಾವೀ ಪತ್ನಿ ರೇವತಿ ಜೊತೆ ಶಾಪಿಂಗ್  ಇಲ್ಲಾ,ಸದ್ಯಕ್ಕೆ ಸಿನಿಮಾ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದೆನೆ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ: ಭಾವೀ ಪತ್ನಿ ರೇವತಿ ಜೊತೆ ಶಾಪಿಂಗ್  ಇಲ್ಲಾ,ಸದ್ಯಕ್ಕೆ ಸಿನಿಮಾ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದೆನೆ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ  ಮಾತನಾಡಿದ ಅವರು, ಬರೋ ಏ.೧೭ ಕ್ಕೆ ಮದುವೆ ಫಿಕ್ಸ್ ಆಗಿದೆ ನಿಜ, ಆದರೆ ರೇವತಿಯವರೊಂದಿಗೆ ಶಾಪಿಂಗ್ ಗೆ ಹೋಗಿಲ್ಲ, ಆದರೆ ಏ.೧೦ ರ ವರೆಗೂ ನನ್ನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೇನೆ, ಶೂಟಿಂಗ್ ಮುಗಿದ ಬಳಿಕ ಭೇಟಿಯಾಗುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಏಪ್ರಿಲ್ ೧೭ಕ್ಕೆ ಮದುವೆ ನಿಗದಿಯಾಗಿದೆ, ನನ್ನ ಮದುವೆ ಜವಾಬ್ದಾರಿಯನ್ನ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ವಹಿಸಿಕೊಂಡಿದ್ದಾರೆ, ನಮ್ಮ ಇಡೀ ಕುಟುಂಬ ಆಸಕ್ತಿ ವಹಿಸಿ ಮದುವೆ ಕಾರ್ಯದಲ್ಲಿ ತೊಡಗಿದೆ, ನಾನು ಇನ್ನೂ ಹೆಸರಿಡದ ನನ್ನ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದೇನೆ, ಏಪ್ರಿಲ್ ೧೦ ರ ಬಳಿಕ ಮದುವೆ ಕಾರ್ಯದಲ್ಲಿ ತೊಡಗುವೆ ಎಂದರು.

ಮದುವೆ ಆಹ್ವಾನ ಪತ್ರಿಕೆ ಮುದ್ರಣ ಆಗ್ತಿದೆ. ಶೀಘ್ರವೇ ಹಂಚಿಕೆ ಕಾರ್ಯ ಆರಂಭವಾಗಲಿದೆ, ಮಂಡ್ಯ, ರಾಮನಗರ ಭಾಗದ ಜನತೆಯ ಜೊತೆ ನನಗೆ ಒಡನಾಟ ಜಾಸ್ತಿ ಇದೆ, ನಾನೇ ಖುದ್ದಾಗಿ ಮದುವೆ ಆಮಂತ್ರಣ ನೀಡುತ್ತೆನೆ, ಮದುವೆ ಕಾರ್ಯಕ್ಕೆ ಎರಡೂ ಜಿಲ್ಲೆಯ ಜನರನ್ನ ಆಹ್ವಾನಿಸುತ್ತೇವೆ, ಪ್ರತಿ ಮನೆ ಮನೆಗೂ ಆಮಂತ್ರಣ ಕೊಡೋದಕ್ಕೆ ನಮ್ಮ ಕಾರ್ಯಕರ್ತರಿಗೆ ಸೂಚಿಸಲಾಗಿದೆ, ಎಲ್ಲರು ಬಂದು ಆಶೀರ್ವಾದ ಮಾಡಬೇಕು, ನಮ್ ಜೊತೆ ಬಂದು ಊಟ ಮಾಡಬೇಕು ಅನ್ನೋದು ನಮ್ಮ ಆಶಯ ಎಂದು ಅವರು ತಿಳಿಸಿದರು.

ನಿನ್ನೆ ಕೆ.ಆರ್.ಪೇಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಭಟನಾ ಧರಣಿ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯದಲ್ಲಿ ಉಪಚುನಾವಣೆ ಬಳಿಕ ದ್ವೇಷದ ರಾಜಕಾರಣ ಜಾಸ್ತಿ ಆಗಿದೆ. ಇದಕ್ಕೆ ಕಡಿವಾಣ ಹಾಕಬೇಕು.

ಈ ರೀತಿಯ ರಾಜಕಾರಣ ಮಾಡೋದು ತಪ್ಪು, ಹಿರಿಯರಾದ ದೇವೇಗೌಡರು ನಮಗೆಲ್ಲಾ ಮಾದರಿ. ಹೋರಾಟ ಮಾಡಿಕೊಂಡೇ ಬಂದವರು, ನೊಂದ ಕಾರ್ಯಕರ್ತರ ಪರ ಅವರು ನಿಂತಿದ್ದಾರೆ, ನಾವು ಸಹ ಕಾರ್ಯಕರ್ತರಿಗೆ ತೊಂದರೆಯಾದಾಗ ಅವರ ಪರ ನಿಲ್ತೀವಿ, ಅದರಲ್ಲಿ ತಪ್ಪೇನಿದೆ ಎಂದರು.

ಇದಕ್ಕೂ ಮುನ್ನಾ ಮಂಡ್ಯದ ಒಳಾಂಗಣ ಕ್ರಿಡಾಂಗಣದ ಆವರಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕ್ಷೀರಸಾಗರ ಸಂಘ, ಪಶುಸಂಗೋಪನಾ ಇಲಾಖೆ, ಮನ್ಮುಲ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಲುಕರೆಯುವ ಸ್ಪರ್ಧೆಯ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡು ಶುಭಹಾರೈಸಿದರು. ಈ ವೇಳೆ ಶಾಸಕ ಎಂ.ಶ್ರೀನಿವಾಸ್,ನಗರಸಭಾಸದಸ್ಯ ನಾಗೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT