ಜಗ್ಗೇಶ್ -ಗುರುಪ್ರಸಾದ್ ಕಾಂಬಿನೇಶನ್ನ ರಂಗನಾಯಕ ಏಪ್ರಿಲ್ 2ರಿಂದ ಶೂಟಿಂಗ್ ಆರಂಭ
‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್ನ ‘ರಂಗನಾಯಕ’ ಸಿನಿಮಾ ಶೂಟಿಂಗ್ ಏಪ್ರಿಲ್ 2ರಿಂದ ಆರಂಭವಾಗಲಿದೆ.
‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್ನ ‘ರಂಗನಾಯಕ’ ಸಿನಿಮಾ ಶೂಟಿಂಗ್ ಏಪ್ರಿಲ್ 2ರಿಂದ ಆರಂಭವಾಗಲಿದೆ.
ರಂಗನಾಯಕ’ ಚಿತ್ರದ ಕುರಿತು ಮಾಹಿತಿ ನೀಡುವ ವಿಖ್ಯಾತ್, ‘ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ಜತೆಯಾಟದಲ್ಲಿ ಈ ಹಿಂದೆ ಬಂದಿದ್ದ ಎರಡು ಚಿತ್ರಗಳಿಗೂ, ‘ರಂಗನಾಯಕ’ ಚಿತ್ರಕ್ಕೂ ಬಹಳ ವ್ಯತ್ಯಾಸ ಇದೆ. ಈ ಚಿತ್ರದ ಕಥೆ 90ರ ದಶಕದಲ್ಲಿ ನಡೆಯಲಿದ್ದು, ಬಹುತೇಕ ಚಿತ್ರೀಕರಣ ಸೆಟ್ನಲ್ಲೇ ನಡೆಯಲಿದೆ.
ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾಗಿದ್ದ ‘ಪುಷ್ಪಕ ವಿಮಾನ’ಚಿತ್ರಕ್ಕೆ ಕುಂಬಳಗೋಡಿನ ಬಳಿ ಸೆಟ್ ಹಾಕಿದ್ದೆವು. ಅದೊಂದು ರೀತಿಯಲ್ಲಿ ನಮಗೆ ಲಕ್ಕಿ. ಈಗಲೂ ಅಲ್ಲಿಯೇ ಸೆಟ್ ಹಾಕಲು ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ದಾರೆ,.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.