ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

ಗರುಡ ಗಮನ ವೃಷಭ ವಾಹನದಲ್ಲಿ ಹುಲಿ ಪೋಸ್ಟರ್: ಹೆಚ್ಚಿದ ಕುತೂಹಲ

ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ  ಚಿತ್ರದ 2 ನೇ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.

ನಿರ್ದೇಶಕ, ನಟ ರಾಜ್​ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ  ಚಿತ್ರದ 2 ನೇ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.

ಬಿಡುಗಡೆಗೊಂಡ ಪೋಸ್ಟರ್​ನಲ್ಲಿ ಹುಲಿ ಮುಖವಾಡದ ಫೋಟೋವನ್ನು ಹಾಕಲಾಗಿದೆ. ಜೊತೆಗೆ ಮಂಗಳಾದೇವಿ ಫ್ರೆಂಡ್ಸ್​ (ರಿ) ಮಂಗಳೂರು ಮೊದಲ ವರ್ಷದ ಶಾರದಾ ಹುಲಿ ಎಂದು ಬರೆಯಲಾಗಿದೆ.

ಈ ಪೋಸ್ಟರ್​ ಗಮನಿಸಿದಾಗ ಇದು ಮಂಗಳೂರಿನ ಸುತ್ತಮುತ್ತಲೂ ನಡೆಯುವ ಕಥೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಜೊತೆಗೆ ತುಳುನಾಡಿನ ಆಚರಣೆಗಳಲ್ಲಿ ಒಂದಾದ ಹುಲಿವೇಷ ಕೂಡ ಇದರಲ್ಲಿ ಇರಲಿದೆ. ಈ ಬಾರಿ ಶೆಟ್ರು ಪ್ರೇಕ್ಷಕರನ್ನು ಮಂಗಳೂರು ಸುತ್ತಲೂ ಸುತ್ತಿಸಲು ರೆಡಿಯಾಗಿದ್ದಾರೆ ಎಂಬುದು ಪೋಸ್ಟರ್​ ನೋಡಿದಾಗ ತಿಳಿದುಬರುತ್ತಿದೆ.

ಗರುಡ ಗಮನ ವೃಷಭ ವಾಹನ' ರಾಜ್​ ಬಿ ಶೆಟ್ಟಿ ಮತ್ತು ರಿಷಬ್ ಕಾಂಬಿನೇಷನ್​ನಲ್ಲಿ ಬರುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ  ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ರಾಜ್​ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ನಿರ್ದೇಶಕ ರಿಷಬ್​​​ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಗರುಡ ಗಮನ ವೃಷಭ ವಾಹನವನ್ನು ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಾಟಕದಲ್ಲಿನ ಅಹಂಕಾರದ ಬಗ್ಗೆ  ಉಲ್ಲೇಖಿಸಲಾಗಿದೆ.  ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಿಸಲಾಗತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!