ಬ್ಯಾಟ್ ಮ್ಯಾನ್ ಗೂ ತಟ್ಟಿತು ಕೊರೋನಾ ವೈರಸ್ ಬಿಸಿ! 
ಸಿನಿಮಾ ಸುದ್ದಿ

ಬ್ಯಾಟ್ ಮ್ಯಾನ್ ಗೂ ತಟ್ಟಿತು ಕೊರೋನಾ ವೈರಸ್ ಬಿಸಿ! 

ಕೊರೋನಾ ವೈರಸ್ ವಿದೇಶಿ ರಾಜಕಾರಣಿಗಳು, ಪ್ರಧಾನಿಗಳು ಅವರ ಕುಟುಂಬ ಸದಸ್ಯರನ್ನೂ ವ್ಯಾಪಿಸಿದ್ದು, ಈಗ ಬ್ಯಾಟ್ ಮ್ಯಾನ್ ಗೂ ವೈರಾಣುವಿನ ಬಿಸಿ ತಟ್ಟಿದೆ. 

ಲಂಡನ್: ಕೊರೋನಾ ವೈರಸ್ ವಿದೇಶಿ ರಾಜಕಾರಣಿಗಳು, ಪ್ರಧಾನಿಗಳು ಅವರ ಕುಟುಂಬ ಸದಸ್ಯರನ್ನೂ ವ್ಯಾಪಿಸಿದ್ದು, ಈಗ ಬ್ಯಾಟ್ ಮ್ಯಾನ್ ಗೂ ವೈರಾಣುವಿನ ಬಿಸಿ ತಟ್ಟಿದೆ. 

ದಿ ಬ್ಯಾಟ್ ಮ್ಯಾನ್ ಸಿನಿಮಾ ಚಿತ್ರೀಕರಣವನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಎರಡುವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ. 

ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಮತ್ತು ಆತನ ಪತ್ನಿ ರೀಟಾ ವಿಲ್ಸನ್ ಗೆ ಕೊರೋನಾ ವೈರಾಣು ಸೋಂಕು ತಗುಲಿದೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಬ್ಯಾಟ್ ಮ್ಯಾನ್ ಸಿನಿಮಾ ಚಿತ್ರೀಕರಣವನ್ನು ಹಾಲಿವುಡ್ 2 ವಾರಗಳ ಕಾಲ ಸ್ಥಗಿತಗೊಳಿಸಿದೆ. 

ಜನವರಿಯಿಂದ ಲಂಡನ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗ ಲಿವರ್ಪೂಲ್ ಗೆ ಚಿತ್ರೀಕರಣವನ್ನು ಸ್ಥಾಳಂತರಿಸಬೇಕೆಂಬ ನಿರ್ಧಾರ ಮಾಡಲಾಗಿತ್ತು. ಆದರೆ ಕೊರೋನಾ ವೈರಸ್ ನ ಪರಿಣಾಮ ಈಗ ಚಿತ್ರೀಕರಣ ಸ್ಥಗಿತಗೊಂಡಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2021 ರ ಜೂನ್ ವೇಳೆಗೆ ಬ್ಯಾಟ್ ಮ್ಯಾನ್ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಈ ಬೆಳವಣಿಗೆಯಿಂದ ಚಿತ್ರ ಬಿಡುಗಡೆ ದಿನಾಂಕವೂ ವ್ಯತ್ಯಯವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ರಕ್ಷಣಾ ಕಾರ್ಯಾಚರಣೆ ಆರಂಭ

ಆಪರೇಷನ್‌ ಕಮಲದ ಆತಂಕ: ಅಸ್ಸಾಂ ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌; ಅಖಾಡಕ್ಕಿಳಿದ ಡಿಕೆ ಶಿವಕುಮಾರ್

ರಾಜ್ಯದ 470 ಹಳ್ಳಿಗಳಿಗೆ ಮೊಬೈಲ್ ನೆಟ್​ವರ್ಕೇ ಇಲ್ಲ..!

ಮೋದಿ ನಿಜವಾದ ಮುತ್ಸದ್ದಿ: ದೂರದೃಷ್ಟಿ ಹೊಂದಿರುವ ಅದ್ಭುತ ನಾಯಕ; ನಟ ಮೋಹನ್‌ ಲಾಲ್ ಶ್ಲಾಘನೆ

ಮರ್ಯಾದಾ ಹತ್ಯೆ ತಡೆಗೆ ಕಠಿಣ ಕಾನೂನು: 'ಇವ ನಮ್ಮವ ಇವ ನಮ್ಮವ' ಮಸೂದೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

SCROLL FOR NEXT