ಜಗ್ಗೇಶ್ 
ಸಿನಿಮಾ ಸುದ್ದಿ

ಮಂತ್ರಾಲಯದಲ್ಲಿ ಜನ್ಮದಿನ ಆಚರಿಸಿಕೊಂಡ ಜಗ್ಗೇಶ್, 'ತೋತಾಪುರಿ'' ಜತೆಗೆ 'ರಂಗನಾಯಕ'ನಾಗಲೂ ಸೈ ಎಂದ ನವರಸನಾಯಕ 

ನವರಸ ನಾಯಕ ಜಗ್ಗೇಶ್ ಮಂಗಳವಾರ (ಮಾರ್ಚ್ ೧೭) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಶ್ರೀರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು ತನ್ನ ಕುಟುಂಬದೊಂದಿಗೆ ಮಂತ್ರಾಲಯದಲ್ಲಿ ಈ ದಿನ ಕಳೆಯಲಿದ್ದಾರೆ.  ವಿಜಯಪ್ರಸಾದ್ ನಿರ್ದೇಶನದ ಮತ್ತು ಕೆ.ಎ.ಸುರೇಶ್ ನಿರ್ಮಿಸಲಿರುವ ಅವರ ಮುಂಬರುವ ಚಿತ್ರ "ತೋತಾಪುರಿ" ಶೂಟಿಂಗ್ ನಲ್ಲಿ ತೊಡಗಿರುವ ನಟ ಚೊತ್ರದಲ್ಲಿ ಗುರುರಾ

ನವರಸ ನಾಯಕ ಜಗ್ಗೇಶ್ ಮಂಗಳವಾರ (ಮಾರ್ಚ್ ೧೭) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಶ್ರೀರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು ತನ್ನ ಕುಟುಂಬದೊಂದಿಗೆ ಮಂತ್ರಾಲಯದಲ್ಲಿ ಈ ದಿನ ಕಳೆಯಲಿದ್ದಾರೆ.  ವಿಜಯಪ್ರಸಾದ್ ನಿರ್ದೇಶನದ ಮತ್ತು ಕೆ.ಎ.ಸುರೇಶ್ ನಿರ್ಮಿಸಲಿರುವ ಅವರ ಮುಂಬರುವ ಚಿತ್ರ "ತೋತಾಪುರಿ" ಶೂಟಿಂಗ್ ನಲ್ಲಿ ತೊಡಗಿರುವ ನಟ ಚೊತ್ರದಲ್ಲಿ ಗುರುರಾಯರ ಭಕ್ತನಾದ ರೈತನ ಗೆಟಪ್ ನಲ್ಲಿ ಕಾಣಿಸುತ್ತಿದ್ದಾರೆ.

ಚಿತ್ರ ಎರಡು ಭಾಗಗಳಿಂದ ಕೂಡಿದ್ದು ನಿರ್ಮಾಪಕರು ಇದರ ಬಿಡುಗಡೆಗೆ ಮುನ್ನ ರಡೂ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ನೋಡುತ್ತಿದ್ದಾರೆ. ತಂಡವು ಶೂಟಿಂಗ್‌ನ ಕೊನೆಯ ಹಂತದಲ್ಲಿದೆ ಮತ್ತು ಈಗ ತೋತಾಪುರಿಯ ಯ ಮೊದಲ ಭಾಗಕ್ಕೆ ಹಾಡುಗಳನ್ನು ಚಿತ್ರೀಕರಿಸಬೇಕಾಗಿದೆ, ಮತ್ತು ಸರಣಿಯ ಎರಡನೇ ಭಾಗಕ್ಕೆ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಬೇಕಾಗಿದೆ. 

ಏತನ್ಮಧ್ಯೆ ಜಗ್ಗೇಶ್ "ರಂಗನಾಯಕ" ಚಿತ್ರದ ಶೂಟಿಂಗ್  ಪ್ರಾರಂಭಿಸಲು ತಯಾರಾಗುತ್ತಿದ್ದಾರೆ. ಇದು ನಿರ್ದೇಶಕ ಗುರುಪ್ರಸಾದ್ ಅವರೊಂದಿಗಿನ ಯೋಜನೆಯಾಗಿದೆ. ಅವರೊಂದಿಗೆ ಈ ಹಿಂದೆ ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರಗಳಲ್ಲಿ ಜಗ್ಗೇಶ್ ಕೆಲಸ ಮಾಡಿದ್ದರು.

ಚಿತ್ರ ಇದೇ ಏಪ್ರಿಲ್  2ಕ್ಕೆ ಸೆಟ್ಟೇರಲಿದೆ. . ತಯಾರಕರು ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ರಾಧಿಕಾ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ಅವರಂತಹ ಹೆಸರುಗಳು ಸಹ ಕೇಳಿ ಬಂದಿದೆ.  ಆದರೆ, ತಯಾರಕರು ಇನ್ನೂ ನಾಯಕಿ ಬಗ್ಗೆ ಅಧಿಕೃತ ಘೋಷಣೆ ಂಆಡಿಲ್ಲ. . ಅನೂಪ್ ಸೀಳನ್  ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರ ವಿಖ್ಯಾತ್  ಚಿತ್ರ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT