ಮಾರಕ ಕೊರೋನಾವೈರಸ್ ಹಾವಳಿಯಿಂದ ರಾಣಾ ದಗ್ಗುಬಾಟಿ ಅಭಿನಯದ "ಹಾಥಿ ಮೇಲೆ ಸಾಥಿ" ಚಿತ್ರದ ರಿಲೀಸ್ ಮುಂದೂಡಿಕೆಯಾಗಿದೆ. ತಮಿಳು ಭಾಷೆಯಲ್ಲಿ "ಕಾಡಾನ್", ತೆಲುಗಿನಲ್ಲಿ "ಅರಣ್ಯ" ಎಂದು ಹೆಸರಿಸಲಾಗಿರುವ ಈ ಚಿತ್ರವು ಈ ಹಿಂದೆ 2020 ರ ಏಪ್ರಿಲ್ 2 ರಂದು ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು.
ಈರೋಸ್ ಇಂಟರ್ನಾಷನಲ್ ನಿರ್ಮಾಣ ಸಂಸ್ಥೆ COVID-19 ಕೊರೋನಾವೈರಸ್ ಬೆಳವಣಿಗೆಗಳ ಕಾರಣ , ಹಾಥಿ ಮೇರೆ ಸಾಥಿ, ಆರಣ್ಯ ಮತ್ತು ಕಾಡಾನ್ನಿಗದಿತ ಬಿಡುಗಡೆಗೆ ಸಂಬಂಧಿಸಿದಂತೆ ನಮ್ಮ ಇತ್ತೀಚಿನ ಪ್ರಕಟಣೆ ಬದಲಾಗಿದೆ. ನಮ್ಮ ಪಾಲುದಾರರು, ಪ್ರದರ್ಶಕರು, ವಿತರಕರು ಮತ್ತು ಪ್ರೇಕ್ಷಕರ ಎಲ್ಲರ ಆರೋಗ್ಯ ಮತ್ತು ಸಂತೋಷಕ್ಕಾಗಿ ನಾವು ಪ್ರಾರ್ಥಿಸುತ್ತೇವೆ, ಮತ್ತು ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು ಶೀಘ್ರದಲ್ಲೇ ಹೊಸ ಬಿಡುಗಡೆಯ ದಿನಾಂಕದೊಂದಿಗೆ ಹಿಂತಿರುಗುತ್ತೇವೆ ಎಂದು ನಾವು ಭಾವಿಸುತ್ತೇವೆ. ಎಂದಿದೆ.
ಇದೇ ವೇಳೆ ಬಾಲಿವುಡ್ ನಲ್ಲಿ ಸೂರ್ಯವಂಶಿ, ಸರ್, ಬ್ರಹ್ಮಾಸ್ತ್ರ, ಸರ್ದಾರ್ ಉದಮ್ ಸಿಂಗ್ ನಂತಹಾ ಹಲವು ಚಿತ್ರಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ರಣವೀರ್ ಸಿಂಗ್ ಅಭಿನಯದ ಕಬೀರ್ ಖಾನ್ ಅವರ 83ನೇ ಟ್ರೈಲರ್ ಬಿಡುಗಡೆ ಇತ್ತೀಚೆಗೆ ರದ್ದಾಗಿದೆ. ಚಿತ್ರವು ಏಪ್ರಿಲ್ 10ಕ್ಕೆ ಬಿಡುಗಡೆಗೊಳ್ಳುವುದು ಅನುಮಾನವಾಗಿದೆ. .