ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನ ಲೇಟೆಸ್ಟ್ ಕ್ರಶ್ 'ದಿಯಾ'ದ ಖುಷಿ!

ದಿಯಾ ಚಿತ್ರ ನಟಿ ಖುಷಿಗೆ ಹೆಸರು ಅವಕಾಶ ಎರಡನ್ನೂ ತಂದುಕೊಟ್ಟಿದೆ. ಕೆ ಎಸ್ ಅಶೋಕ ಅವರ ದಿಯಾ ಚಿತ್ರದಲ್ಲಿ ಶೀರ್ಷಿಕೆ ಪಾತ್ರ ಮಾಡಿರುವ ಖುಷಿ ಸದ್ಯ ಬೆಳ್ಳಿ ತೆರೆಯಲ್ಲಿ ಮಾತ್ರವಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಸಹ ರಾತ್ರೋರಾತ್ರಿ ಫೇಮಸ್ಸಾಗಿದ್ದಾರೆ.

ದಿಯಾ ಚಿತ್ರ ನಟಿ ಖುಷಿಗೆ ಹೆಸರು ಅವಕಾಶ ಎರಡನ್ನೂ ತಂದುಕೊಟ್ಟಿದೆ. ಕೆ ಎಸ್ ಅಶೋಕ ಅವರ ದಿಯಾ ಚಿತ್ರದಲ್ಲಿ ಶೀರ್ಷಿಕೆ ಪಾತ್ರ ಮಾಡಿರುವ ಖುಷಿ ಸದ್ಯ ಬೆಳ್ಳಿ ತೆರೆಯಲ್ಲಿ ಮಾತ್ರವಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಸಹ ರಾತ್ರೋರಾತ್ರಿ ಫೇಮಸ್ಸಾಗಿದ್ದಾರೆ.

ಅಮೆಜಾನ್ ನಲ್ಲಿ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ಚಿತ್ರ ಮತ್ತು ಅದರಲ್ಲಿ ಖುಷಿ ಪಾತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಇಷ್ಟು ದಿನ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರದಿದ್ದ ಖುಷಿ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಅಕೌಂಟ್ ತೆರೆದು ಆಕ್ಟೀವ್ ಆಗಿದ್ದಾರೆ. ಕೇವಲ 2 ದಿನಗಳಲ್ಲಿ ಖುಷಿಗೆ ಸುಮಾರು 30 ಸಾವಿರ ಅನುಯಾಯಿಗಳಾಗಿದ್ದಾರಂತೆ.

ಕರ್ನಾಟಕ ಸೇರಿದಂತೆ ಜಗತ್ತಿನ ನಾನಾ ಭಾಗಗಳಿಂದ ಅವರಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆಯಂತೆ. ಇದು ಕನಸೋ, ನನಸೋ ಎಂದು ಖುಷಿಗೆ ಆಗುತ್ತಿದೆಯಂತೆ. ದಿಯಾ ಚಿತ್ರದ ಬಳಿಕ ನನ್ನ ಜೀವನ ಸಂಪೂರ್ಣ ಬದಲಾಗಿದೆ ಎನ್ನುತ್ತಾರೆ.

ಈ ಸಂದರ್ಭದಲ್ಲಿ ನಿರ್ದೇಶಕ ಅಶೋಕ್ ಮತ್ತು ನಿರ್ಮಾಪಕ ಕೃಷ್ಣ ಚೈತನ್ಯ ಅವರಿಗೆ ಧನ್ಯವಾದ ಹೇಳುತ್ತಾರೆ. ಅನೇಕ ಕಡೆಗಳಿಂದ ಸಿನಿಮಾಕ್ಕೆ ಅವಕಾಶಗಳು ಬರುತ್ತಿದ್ದು 5ರಿಂದ 6 ಕಥೆಗಳನ್ನು ಕೇಳಿದ್ದಾರಂತೆ. ಅವುಗಳಲ್ಲಿ ನಕ್ಷೆ ಎಂಬ ಶೀರ್ಷಿಕೆಯ ಕಥೆಯನ್ನು ಖುಷಿ ಆಯ್ಕೆ ಮಾಡಿಕೊಂಡಿದ್ದು ಇಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಮಧು ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು ಶಿವಪ್ರಕಾಶ್ ನಿರ್ಮಾಪಕರು, ಪೂರ್ಣಚಂದ್ರ ತೇಜಸ್ವಿ ಸಂಗೀತ ಮತ್ತು ಮಹೇಶ್ ಅವರ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿರುತ್ತದೆ.ಅರ್ಚನಾ ಜೋಯಿಸ್, ಪ್ರಮೋದ್ ಶೆಟ್ಟಿ ಮತ್ತು ಸುಮನ್ ನಗರ್ ಗರ್ ಕೂಡ ಈ ಚಿತ್ರದಲ್ಲಿರಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT