ಶಾನ್ವಿ ಶ್ರೀವಾಸ್ತವ 
ಸಿನಿಮಾ ಸುದ್ದಿ

ಜನರ ತಾಳ್ಮೆ ಕಡಿಮೆಯಾಗಿ ಹತಾಶೆ ಹೆಚ್ಚುತ್ತಿದೆ: ಲಾಕ್ ಡೌನ್ ಕುರಿತಂತೆ ಶಾನ್ವಿ ಶ್ರೀವಾಸ್ತವ ಮಾತುಗಳು

ಸಾಮಾಜಿಕ ವಿಚಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್ ಡೌನ್ ಮಧ್ಯೆ ತನ್ನ ಸಮಯವನ್ನು ಬಳಸಿಕೊಳ್ಳುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ, ಈಗ ಕೌಟುಂಬಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.ಮಹಿಳೆಯರ ಹಕ್ಕುಗಳನ್ನಾಗಿ ಮಾತ್ರ ಇದನ್ನು ನೋಡಬಾರದು ಎಂಬುದಾಗಿ ಅವನೆ ಶ್ರೀಮನ್ನಾರಾಯಣ ಚಿತ್ರದ ನಾಯಕಿ ಒತ್ತಾಯಿಸಿದ್ದಾರೆ. 

ಸಾಮಾಜಿಕ ವಿಚಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್ ಡೌನ್ ಮಧ್ಯೆ ತನ್ನ ಸಮಯವನ್ನು ಬಳಸಿಕೊಳ್ಳುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ, ಈಗ ಕೌಟುಂಬಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.ಮಹಿಳೆಯರ ಹಕ್ಕುಗಳನ್ನಾಗಿ ಮಾತ್ರ ಇದನ್ನು ನೋಡಬಾರದು ಎಂಬುದಾಗಿ ಅವನೆ ಶ್ರೀಮನ್ನಾರಾಯಣ ಚಿತ್ರದ ನಾಯಕಿ ಒತ್ತಾಯಿಸಿದ್ದಾರೆ.

"ಇದು ಮಹಿಳೆಯರು, ಪುರುಷರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ" ಎಂದು ಅವರು ಹೇಳುತ್ತಾರೆ, ಪ್ರತಿ ಸಂತ್ರಸ್ಥರೂ ಯಾವುದೇ ಲಿಂಗದವರಿರಲಿ ಲಿಂಗವನ್ನು ಲೆಕ್ಕಿಸದೆ, ಅವರಿಗೆ ನೆರವು ನೀಡುವ ಅಗತ್ಯವಿದೆ.  ‘Don’t Mask Your Abuse’ ಎಂಬ ಅಭಿಯಾನವನ್ನು ಪ್ರಾರಂಭಿಸಿರುವ ನಟಿ ಯಾರಾದರೂ ಕುಡ ಕೌಟುಂಬಿಕ ಕಿರುಕುಳಕ್ಕೆ ಬಲಿಯಾಗಿದ್ದರೆ, ಹಾಗೆ ಆದವರ ಬಗೆಗೆ ಮಾಹಿತಿ ಇದ್ದರೆ ಅವರು 1091 ಸಂಖ್ಯೆಗೆ ಕರೆ ಮಾಡಬೇಕೆಂದು ನಟಿ ಹೇಳಿದ್ದಾರೆ. ಈ ಉಪಕ್ರಮದ ಬಗ್ಗೆ  ಮಾರ್ಕೆಟಿಂಗ್ ಏಜೆನ್ಸಿ ದಿ ಬಿಗ್ ಲಿಟಲ್ ಸೋಷಿಯಲ್ ಮಿಡಿಯಾ ಗಳ ಮೂಲಕ  ಜಾಗೃತಿ ಅಭಿಯಾನ ನಡೆಸಲಿದೆ.

"ಒಂದು ತಿಂಗಳ ಕಾಲ ಲಾಕ್ ಡೌನ್ ಆಗಿರುವುದರಿಂದ, ಕೌಟುಂಬಿಕ ಹಿಂಸಾಚಾರದ ಪ್ರಕರಣಗಳ ಹೆಚ್ಚಳದ ಬಗ್ಗೆ ನಾನು ವರದಿಗಳನ್ನು ನೋಡಿದ್ದೇನೆ. ಈ ವಿಷಯವು ನನಗೆ ಗಂಬೀರವಾಗಿ ಕಾಣುತ್ತಿದೆ. ಅದೇ ವೇಳೆ , ಈ ಉಪಕ್ರಮವನ್ನು ತೆಗೆದುಕೊಳ್ಳುತ್ತಿರುವ ತಂಡವು ನನ್ನನ್ನು ಸಂಪರ್ಕಿಸಿ ನಾನು ಅಭಿಯಾನದ ಭಾಗವಾಗಲು  ಕೇಳಿದೆ. ನಾನು ತಕ್ಷಣ ಒಪ್ಪಿಕೊಂಡೆ. ಕೌಟುಂಬಿಕ ಹಿಂಸಾಚಾರವನ್ನು ಎದುರಿಸುತ್ತಿರುವ ಜನರಿಗೆ ಸಹಾಯವಾಣಿಯ ಬಗ್ಗೆ ತಿಳಿದಿಲ್ಲ. ಅದುಈ ಸಮಸ್ಯೆ ಉಲ್ಬಣಕ್ಕೆ ಒಂದು ಕಾರಣವಾಗಿದೆ. , ಈ ಅಭಿಯಾನವು 1091 ಸಹಾಯವಾಣಿಯ ಮೇಲೆ ಕೇಂದ್ರೀಕರಿಸುತ್ತದೆ ಏಕೆಂದರೆ ಅವರಿಗೆ ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ, ”ಎಂದು ಅವರು ಹೇಳುತ್ತಾರೆ

ಲಾಕ್ ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಸ್ವಲ್ಪ ಹೆಚ್ಚುನಿಗಾವಹಿಸಬೇಕಿದೆ“ಜನರು ತಾಳ್ಮೆ ಕಳೆದುಕೊಳ್ಳುತ್ತಿರುವುದರಿಂದ ಹತಾಶೆ ಹೆಚ್ಚಾಗಿದೆ. ತಮಗಾಗಿ ತಮಗೆ ಬೇಕಾದುದನ್ನು ಪಡೆಯಲು ಲು ಅವರಿಗೆ ಸಾಧ್ಯವಾಗುವುದಿಲ್ಲ, ಮತ್ತು ಪ್ರತಿಯಾಗಿ, ತಮ್ಮ ಕೋಪವನ್ನು ಬೇರೊಬ್ಬರ ಜತೆ ತೋರಿಸಿಕೊಳ್ಳುತ್ತಾರೆ.ನೆರೆಹೊರೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಜನರು  ಅರಿಯಬೇಕಿದೆ. ಕೌಟುಂಬಿಕ ಹಿಂಸಾಚಾರದ ಸಂದರ್ಭದಲ್ಲಿ, ಸಹಾಯ ಪಡೆಯಲು ಪ್ರಯತ್ನಿಸಬೇಕು. " ನಟಿ ಹೇಳಿದ್ದಾರೆ.

ಬಿಗ್ ಲಿಟಲ್ ಸಂಸ್ಥಾಪಕಿ ಕಾವ್ಯ ಶಂಕರೇಗೌಡರ ಪ್ರಕಾರ, ಇಂತಹಾ ಸಮಸ್ಯೆಗೆ ಹೆಚ್ಚು ಈಡಾಗುತ್ತಿರುವವರು ಕಡಿಮೆ ಆದಾಯವನ್ನು ಹೊಂದಿದವರಾಗಿದ್ದಾರೆ.ಕೆಲಸ ಮಾಡದ ನಿರುದ್ಯೋಗಿ ಪುರುಷರು, ಮದ್ಯವ್ಯಸನಿಗಳ ಕುಟುಂಬದಲ್ಲಿ ಇದು ಬಹಳ ಬೇಗ ಕಾಣಿಸಿದೆ. ಸಾಮಾಜಿಕ ಒತ್ತಡದಿಂದಾಗಿ ಪುರುಷರು ಇದನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ದಕ್ಕಿಂತ ಮುಖ್ಯವಾಗಿ, ಸಹಾಯವಾಣಿಗಳಿಗೆ ಪುರುಷರಿಂದ ಕರೆಗಳು ಬಂದಾಗ, ಅವರು ಕೂಡ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ

"ಕೋವಿಡ್ -19 ಮಹಾಮಾರಿಯನ್ನು ತೊಡೆದುಹಾಕಲು ಸಾಮಾಜಿಕ ಅಂತರ ಅಗತ್ಯವಾಗಿದೆ. ಹಾಗೆಯೇ ಈ ಸಹಾಯವಾಣಿಯನ್ನು ಸಹ ಪ್ರತಿಯೊಬ್ಬರೂ ತಮ್ಮ ಫೋನ್‌ಗಳಲ್ಲಿ-ಹೊಂದಿರಬೇಕು . ”ಕಾವ್ಯ  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT