ಸಿನಿಮಾ ಸುದ್ದಿ

ಪ್ರೇಮಕಥೆಗಳು ಸರ್ವಕಾಲಕ್ಕೂ ಸಲ್ಲುತ್ತವೆ: ಸತೀಶ್ ನೀನಾಸಂ

Raghavendra Adiga

ಲಾಕ್‌ಡೌನ್ ಅವಧಿಯಲ್ಲಿ ಸ್ಕ್ರಿಪ್ಟ್ ಬರೆಯಲು ಬಳಸಿದ್ದ ನಟಸತೀಶ್ ನಿನಾಸಮ್ ಈಗ ಲವ್ ಸ್ಟೋರಿಯೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿನುತಾ ಮಂಜುನಾಥ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರಕ್ಕೆ ರವಿಶಂಕರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಗಳಲ್ಲಿ 15 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿರುವ ನಿರ್ದೇಶಕ ರವಿಶಂಕರ್ ಪಾಲಿಗಿದು ಮೊದಲ ಸ್ವತಂತ್ರ ನಿರ್ದೇಶನದ ಚಿತ್ರವಾಗಲಿದೆ. “ನಾನು ವಿಭಿನ್ನ ಪ್ರಕಾರದ ಕೌಶಲ್ಯವನ್ನು ಇಷ್ಟಪಡುತ್ತೇನೆ. ನಾನು ಮತ್ತೆ ರೊಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಲು ಬಯಸುತ್ತೇನೆ. ರೋಮ್ಯಾಂಟಿಕ್ ಕಥೆಗಳ ಭಾಗವಾಗಲು ನಾನು ಸಂತಸದಿಂದ ಒಪ್ಪಿದ್ದೇನೆ. ಇದು ಸರ್ವಕಾಲಕ್ಕೆ ಸಲ್ಲುವ ಟಾಪಿಕ್ ಎಂದು ಸಾಬೀತಾಗಿದೆ. ಇದಲ್ಲದೆ, ನಾನು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವುದನ್ನು ಆನಂದಿಸುತ್ತೇನೆ. ರವಿಶಂಕರ್ ಅವರು ಸುಂದರವಾದ ಕಥೆಯೊಂದಿಗೆ ಬಂದಿದ್ದಾರೆ, ಮತ್ತು ಪ್ರಸ್ತುತ ಅವರು ಚಿತ್ರಕಥೆ ಮತ್ತು ಸಂಭಾಷಣೆ ತಯಾರಿಯಲ್ಲಿದ್ದಾರೆ" ಎಂದು ನಟ ಸತೀಶ್ ಹೇಳಿದ್ದಾರೆ.

ನಂದೀಶ್ ನಿರ್ದೇಶನದ ಗೋಧ್ರಾ ಚಿತ್ರದ ಬಾಕಿ ಉಳಿದಿರುವ ಹಾಡಿನ ಚಿತ್ರೀಕರಣ ಪೂರ್ಣಗೊಂಡ ನಂತರ ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಇನ್ನೂ ಹೆಸರಿಸಲಾಗಿರುವ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಏತನ್ಮಧ್ಯೆ, ನಿರ್ಮಾಪಕರಾಗಿಯೂ ಚಾಕಚಕ್ಯತೆ ತೋರಿರುವ ನಟ ನಿರ್ದೇಶನದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅವರು ಬರೆದ ಕಥೆಯನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರೈಸಲಾಗುತ್ತದೆ. ಕನ್ನಡ ಆವೃತ್ತಿಯನ್ನು ಮೈ ನೇಮ್ ಈಸ್ ಸಿದ್ದೇಗೌಡ ಎಂದು ಕರೆಯಲಾಗಿದೆ.

"ಕೋವಿಡ್ -19 ಬಿಕ್ಕಟ್ಟಿನಿಂದಾಗಿ, ನಾನು ಈಗ ನನ್ನ ನಿರ್ದೇಶನದ ಯೋಜನೆಯನ್ನು ಮುಂದಿನ ವರ್ಷಕ್ಕೆ ಹಾಕಿದ್ದೇನೆ. ನನ್ನ ಈ ಚಿತ್ರದ ಬಹುಭಾಗಗಳನ್ನು ಯುಎಸ್ಎಯಲ್ಲಿ ಶೂಟಿಂಗ್ ಮಾಡಬೇಕಿದೆ. ಸದ್ಯ ಸತೀಶ್ ಕಥೆ ಬರವಣಿಗೆ ಪೂರ್ಣಗೊಳಿಸಿದ್ದು ಸಂಭಾಷಣೆಗಳನ್ನು ಬರೆಯುತ್ತಿದ್ದಾರೆ. ಪರಿಮಳ ಲಾಡ್ಜ್ ಸೇರಿದಂತೆ ಆರು ಚಿತ್ರಗಳು ಸತೀಶ್ ಕೈಯಲ್ಲಿದ್ದು ಇದರಲ್ಲಿ ವಿಜಯಪ್ರಸಾದ್ ನಿರ್ದೇಶನದ ಚಿತ್ರವೂ ಇದೆ. ಸದ್ಯ ನಟ ಸತೀಶ್ ತೋತಾಪುರಿ ಚಿತ್ರೀಕರಣ ಮುಗಿಸುವುದರ ನಿರೀಕ್ಷೆಯಲ್ಲಿದ್ದು ಬಳಿಕ ಮುಂದಿನ ಯೋಜನೆಗಳತ್ತ ಹೊರಳಲಿದ್ದಾರೆ.
 

SCROLL FOR NEXT