ಸಿನಿಮಾ ಸುದ್ದಿ

ನಿರ್ದೇಶಕ ಸಚಿನ್ ರವಿ ಹೊಸ ಪ್ರಯೋಗ: ಮಹಾಭಾರತದ ಅಶ್ವತ್ಥಾಮ ಆಧಾರಿತ ಆಕ್ಷನ್ ಥ್ರಿಲ್ಲರ್ ನಲ್ಲಿ ಶಿವಣ್ಣ

Raghavendra Adiga

ಮಹಾಭಾರತದ ಅಶ್ವತ್ಥಾಮನ ಪಾತ್ರ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಹಲವು  ಚಲನಚಿತ್ರ ನಿರ್ಮಾಪಕರ ಮನಸ್ಸು ಸೆಳೆದಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ "ಅವನೆ ಶ್ರೀಮನ್ನಾರಾಯಣ" ಚಿತ್ರದ ತಯಾರಕರಾಗಿದ್ದಾರೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ನಿರ್ದೇಶಕ ಸಚಿನ್ ರವಿ ಪೌರಾಣಿಕ ದಂತಕಥೆಯಾದ ಅಶ್ವತ್ಥಾಮನ ಜೀವನಾಧಾರಿತ  ಆಕ್ಷನ್-ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಗಾಗಿ ಮತ್ತೆ ಜತೆಯಾಗಲಿದ್ದಾರೆ. ಮತ್ತಿದಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಾಯಕರಾಗಲಿದ್ದಾರೆ.

ಪ್ರೊಡಕ್ಷನ್ ಹೌಸ್ ಈ ಯೋಜನೆಯನ್ನು ಘೋಷಿಸಿದ್ದು  ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನಿ ಸ್ಟುಡಿಯೋ ವಿಶೇಷವಾಗಿ ವಿನ್ಯಾಸಗೊಳಿಸಿದ ಪೋಸ್ಟರ್ ಅನ್ನು ಅನಾವರಣಗೊಳಿಸಿತು. ಬೃಹತ್ ಯೋಜನೆಗಾಗಿ ನಿರ್ಮಾಪಕ ಮತ್ತು ನಿರ್ದೇಶಕರು ಶಿವಣ್ಣ ಜತೆ ಸೇರಿದ್ದಾರೆ. ಸಚಿನ್ ಹಿಂದೂ ಪುರಾಣದಿಂದ ಚಿರಂಜೀವಿಯಾಗಿದ್ದವನ ಜೀವನದ ಮೇಲೆ ಕಾಲ್ಪನಿಕ ಕಥಾಹಂದರವನ್ನು ರಚಿಸಿದ್ದಾರೆ ಈ ಚಲನಚಿತ್ರವು ಪ್ರಸ್ತುತ ಟೈಮ್‌ಲೈನ್‌ನಲ್ಲಿ ಹೊಂದಿಕೆಯಾಗಲಿದೆ. ಅಶ್ವತ್ಥಾಮಭೂಮಿಯ ಮೇಲಿನ ಪ್ರಯಾಣ, ಅವನು ತನ್ನ ಜೀವನದುದ್ದಕ್ಕೂ ಸಂಬಂಧಗಳನ್ನು ಹೇಗೆ ನಿಭಾಯಿಸಿದ್ದನೆನ್ನುವ ಅಂಶ ಮತ್ತು ಅವನ ವಿಶೇಷ ಅಧಿಕಾರಗಳ ಲಾಭವನ್ನು ಪಡೆಯಲು ಬಯಸುವ ದುಷ್ಟ ಜನರಿಂದ ಅವನು ಹೇಗೆ ತಪ್ಪಿಸಿಕೊಂಡಎಂಬುದನ್ನು ಅನ್ವೇಷಿಸುತ್ತದೆ. ವಿಕಿ ಕೌಶಲ್ ಅಭಿನಯದ ಮತ್ತು ರೋನಿ ಸ್ಕ್ರೂವಾಲಾ ನಿರ್ಮಾಣದ ಈ ಪಾತ್ರದ ಬಗ್ಗೆ ಹಿಂದಿಯಲ್ಲಿ ಒಂದು ಪಿರಿಯಡ್ ಡ್ರಾಮಾ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತದೆ.

"ಫ್ಯಾಂಟಮ್"ನಿರ್ದೇಶಕ ಅನೂಪ್ ಭಂಡಾರಿ  ಕೂಡ ಪೌರಾಣಿಕ ಪಾತ್ರದ ಬಗ್ಗೆ ಚಿತ್ರ ಮಾಡುತ್ತಿರುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಮತ್ತು ಈಗ ಇದು ಮಹಾಭಾರತದ ಜನಪ್ರಿಯ ಪಾತ್ರಗಳಲ್ಲಿ ಒಂದನ್ನು ಅನ್ವೇಷಿಸುವ ಮತ್ತೊಂದು ಯೋಜನೆಯಾಗಿದೆ.  ನಿರ್ಮಾಪಕರು ಶೀಘ್ರದಲ್ಲೇ ಶೀರ್ಷಿಕೆಯನ್ನು ಬಹಿರಂಗಪಡಿಸಲು ಮತ್ತು ಮುಂದಿನ ವರ್ಷದ ಆರಂಭದಲ್ಲಿ ಯೋಜನೆಯನ್ನುಕೈಗೆತ್ತಿಕೊಳ್ಳಲು  ಯೋಜಿಸಿದ್ದಾರೆ. ಏತನ್ಮಧ್ಯೆ, ಶಿವರಾಜ್‌ಕುಮಾರ್ ಪ್ರಸ್ತುತ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ಅವರ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಚಿತ್ರೀಕರಣ ಈ ತಿಂಗಳಿನಿಂದ ಪ್ರಾರಂಭವಾಗಲಿದೆ.

SCROLL FOR NEXT