ಸಿನಿಮಾ ಸುದ್ದಿ

'ಲವ್ ಮೋಕ್‌ಟೇಲ್ 2'ನಿಂದ ಹೊರನಡೆದ ಸಂಗೀತ ನಿರ್ದೇಶಕ ರಘು ದೀಕ್ಷಿತ್

Raghavendra Adiga

ಬಹುನಿರೀಕ್ಷಿತ "ಲವ್ ಮೋಕ್‌ಟೇಲ್ 2" ಗಾಗಿ ನಟ-ನಿರ್ದೇಶಕ- ನಿರ್ಮಾಪಕ ಕೃಷ್ಣ ಟೀಂ ಸೇರಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ತಂಡದಿಂದ ಹೊರಬಂದಿದ್ದಾರೆ. ಈ ಚಿತ್ರದ ಮೊದಲ ಭಾಗಕ್ಕೆ ಘು ದೀಕ್ಷಿತ್ ಸಂಯೋಜಿಸಿದ ಸಂಗೀತವು ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. ಚಿತ್ರದ ಎರಡನೇ ಭಾಗದಲ್ಲೀ ಸಹ ಅವರ ಸಂಗೀತದ ಮೋಡಿ ಇರಲಿದೆ ಎಂದು ಭಾವಿಸಲಾಗಿತ್ತು.  ಜೂನ್‌ನಲ್ಲಿ ಅಧಿಕೃತವಾಗಿ "ಲವ್ ಮಾಕ್‌ಟೇಲ್ 2" ಘೀಷಣೆಯಾದಾಗ ಕೃಷ್ಣ ಸಹ ರಘು ದೀಕ್ಷಿತ್ ಜತೆಗೆ ಮತ್ತೊಮ್ಮೆ ಕೆಲಸ ಮಾಡಲು ಹರ್ಷ ವ್ಯಕ್ತಪಡಿಸಿದ್ದರು.

ಆದಾಗ್ಯೂ, ವ್ಯವಹಾರದಲ್ಲಿನ ಕೆಲ ಭಿನ್ನಾಭಿಪ್ರಾಯದಿಂದಾಗಿ ರಘು ದೀಕ್ಷಿತ್ ಇದೀಗ ಚಿತ್ರದಿಂದ ದೂರವಾಗಿದ್ದಾರೆ ಎನ್ನಲಾಗಿದೆ. "ನಿರ್ದೇಶಕನಾಗಿ ನಾನು ಅವರನ್ನು ನಮ್ಮೊಡನಿರಲು ಬಯಸುತ್ತೇನೆ. ಆದರೆ ನಿರ್ಮಾಪಕನಾಗಿ, ನಾನು ಅವರನ್ನು ಉಳಿಸಿಕೊಳ್ಲಲು ಸಾಧ್ಯವಾಗಿಲ್ಲ" ಕೃಷ್ಣ ಹೇಳಿದ್ದಾರೆ. "ವ್ಯವಹಾರ ನಿಯಮಗಳನ್ನು ರೂಪಿಸಲು ಸಾಧ್ಯವಾಗದ ಕಾರಣ, ನಾನು ಯೋಜನೆಯ ಬದಲಾವಣೆಗೆ ತೀರ್ಮಾನಿಸಿದೆ." ಅವರು ವಿವರಿಸಿದ್ದಾರೆ.

ಮಿಲಾನಾ ನಾಗರಾಜ್ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಕೃಷ್ಣ ತಾವು ಮೊದಲಿಗೆ ಚಿತ್ರೀಕರಣ ಪೂರ್ಣಗೊಳಿಸಲು ಬಯಸಿದ್ದಾರೆ. ನಂತರ ಸಂಗೀತದ ಟೀಂ ಜತೆಗೆ ಕುಳೀತುಕೊಳ್ಲಲು ನಿರ್ಧರಿಸಿದ್ದಾರೆ. ಸಧ್ಯ ಕೃಷ್ಣ ನಕುಲ್ ಅಭ್ಯಂಕರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಅಧಿಕೃತ ಮಾಹಿತಿ ಬಂದಿಲ್ಲ. "ಲವ್ ಮೋಕ್‌ಟೇಲ್ 2"ಚಿತ್ರದ ಸಂಗೀತದ ಹಕ್ಕನ್ನು ಖರೀದಿಸಲು ಝೇಂಕಾರ್ ಮ್ಯೂಸಿಕ್ ಜತೆ ಮಾತುಕತೆ ನಡೆದಿದೆ ಎನ್ನುವುದು ಗಾಂಧೀನಫ಼ರದಲ್ಲಿ ಹರಿದಾಡುತ್ತಿರುವ ಸುದ್ದಿಯಾಗಿದೆ.

"ಸಂಗೀತ ನಿರ್ದೇಶಕ-ಗಾಯಕ ನಕುಲ್ ಅಭ್ಯಂಕರ್ ಲವ್ ಮೋಕ್‌ಟೇಲ್‌ನ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದರು. ಅದರಲ್ಲಿ ಅವರು "ಲವ್ ಯು ಚಿನ್ನ "ಮತ್ತು "ಜನುಮಗಳಿಗೆ ಕಾಯುವೆ" ಎಂಬ ಎರಡು ಹಾಡುಗಳನ್ನು ಹಾಡಿದ್ದರು. ನಾವು ಅವರೊಂದಿಗೆ ಚರ್ಚೆಯಲ್ಲಿದ್ದೇವೆ. ಲವ್ ಮೋಕ್‌ಟೇಲ್‌ಗಾಗಿ, ನಾನು ಶೂಟಿಂಗ್ ಪೂರ್ಣಗೊಳಿಸಿದ ನಂತರವೇ ಸಂಗೀತದ ಬಗೆಗೆ ಕೆಲಸ ಪ್ರಾರಂಭವಾಗಿತ್ತು. ಈ ಚಿತ್ರಕ್ಕೆ ಸಹ ನಾನು ಇದೇ ಮಾದರಿ ಅನುಸರಿಸುತ್ತೇನೆ.

"ಶೂಟಿಂಗ್ ಮುಗಿದ ನಂತರವೇ ನಾವು ರೀ ರೆಕಾರ್ಡಿಂಗ್ ಮತ್ತು ಸಂಯೋಜನೆಗಳತ್ತ ಗಮನ ಹರಿಸುತ್ತೇವೆ, ”ಎಂದು ಅವರು ಹೇಳುತ್ತಾರೆ. ಚಿತ್ರದಲ್ಲಿ ರಾಚೆಲ್ ಡೇವಿಡ್ ಹಾಗೂ ಹೊಸ ನಾಯಕಿ ಸುಷ್ಮಿತಾ ಅಭಿನಯವಿದೆ. , ಕುಶಿ ಆಚಾರ್ ಮತ್ತು ಅಭಿಲಾಶ್ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದು ಇದೊಂದು ಎಮೋಷನಲ್ ರೋಮ್ಯಾಂಟಿಕ್ ಡ್ರಾಮಾ ಎನ್ನಲಾಗಿದೆ.

SCROLL FOR NEXT