ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಶುಗರ್ ಫ್ಯಾಕ್ಟರಿ' ಸೇರಲು ಸೋನಾಲ್ ಮಾಂಟೆರೊ ರೆಡಿ!

ದೀಪಕ್ ಅರಸ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ "ಶುಗರ್ ಫ್ಯಾಕ್ಟರಿ" ಮೂವರು ನಾಯಕಿಯರನ್ನು ಹೊಂದಿದೆ. ಈ ಮೂವರ ಪೈಕಿ ಇದೀಗ ಸೋನಾಲ್ ಮಾಂಟೆರೋ ತಂಡಕ್ಕೆ ಸೇರಿಕೊಳ್ಳುತ್ತಿದ್ದಾರೆ.

ಸೋನಾಲ್ ಮಾಂಟೆರೊ
Raghavendra Adiga
Updated On : 9 Nov 2020, 12:22 pm

ದೀಪಕ್ ಅರಸ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ "ಶುಗರ್ ಫ್ಯಾಕ್ಟರಿ" ಮೂವರು ನಾಯಕಿಯರನ್ನು ಹೊಂದಿದೆ.  ಈ ಮೂವರ ಪೈಕಿ ಇದೀಗ ಸೋನಾಲ್ ಮಾಂಟೆರೋ ತಂಡಕ್ಕೆ ಸೇರಿಕೊಳ್ಳುತ್ತಿದ್ದಾರೆ. 

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ "ರಾಬರ್ಟ್" ನಾಯಕಿಯಾದ ಸೋನಾಲ್  ಈ ಹಿಂದೆ "ಪಂಚತಂತ್ರ" ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ "ಶಂಬೋ ಶಿವಶಂಕರ" ಚಿತ್ರದ ಶೂಟಿಂಗ್ ನಡೆಸಿರುವ ನಟಿ "ಶುಗರ್ ಫ್ಯಾಕ್ಟರಿ" ಸೇರಲು ಒಪ್ಪಿದ್ದಾರೆ.

ಶುಗರ್ ಫ್ಯಾಕ್ಟರಿ ನಾಯಕ ಕೃಷ್ಣ ಆಗಿದ್ದು ಚಿತ್ರವನ್ನು ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಗಿರೀಶ್ ರುಂದೇರ್ ನಿರ್ಮಿಸಲಿದ್ದಾರೆ. ನಿರ್ದೇಶಕ ದೀಪಕ್ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದು ನಿರ್ದೇಶಕ ಚೇತನ್ ಕುಮಾರ್ ಇದಕ್ಕೆ ಸಂಭಾಷಣೆ ಬರೆದಿದ್ದಾರೆ. 

Advertisement

Advertisement

ಜನವರಿಯಿಂದ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಯೋಜಿಸಿರುವ ತಯಾರಕರು ಮೊದಲ ಶೆಡ್ಯೂಲ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಿದ್ದು, ನಂತರ ಗೋವಾ, ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ. ಅಂತಿಮವಾಗಿ ವಿದೇಶಗಳಿಗೆ ತೆರಳಲು ಚಿತ್ರತಂಡ ಯೋಜಿಸಿದೆ. ಚಿತ್ರದ ಇನ್ನಿಬ್ಬರು ನಾಯಕಿಯರು, ಇತರೆ ಪಾತ್ರವರ್ಗ ಇನ್ನೂ ಅಂತಿಮವಾಗಿಲ್ಲ. ಚಿತ್ರಕ್ಕೆ ಸಂಗೀತ ಕಬೀರ್ ರಫಿಯವರದ್ದಾಗಿದ್ದು  ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement