ಸಿನಿಮಾ ಸುದ್ದಿ

'ಕನ್ನಡತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಮಾನ್ವಿತಾ ಎಂಟ್ರಿ!

Raghavendra Adiga

ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಸಿನಿಮಾ ಜತೆಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರ ಮನಗೆದ್ದಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯ ಪಾರ್ಟಿಯೊಂದರಲ್ಲಿ ಆಕೆ ಕಾಣಿಸಿಕೊಳ್ಳುತ್ತಿದ್ದು, ಡಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾನ್ವಿತಾ ನಟನೆ ಕೇವಲ ಡಾನ್ಸ್ ದೃಶ್ಯಕ್ಕೆ ಮಾತ್ರ ಸೀಮಿತವೋ, ಧಾರಾವಾಹಿಯ ಇನ್ನಷ್ಟು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಬಗ್ಗೆ "ಕನ್ನಡತಿ" ಧಾರಾವಾಹಿತ ಪ್ರಧಾನ ನಟಿ ರಂಜನಿ ರಾಘವನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು "ಈ ಪರ್ಟಿಯಲ್ಲಿ ನಮ್ಮೊಡನೆ ಬಾಗವಹಿಸಿ-  ಈ ಟೈಮಲ್ಲಿ ಯಾವ್ ಪಾರ್ಟಿ ಅಂತ ಕನ್ಫ್ಯೂಸ್ ಆಗ್ತಿದ್ರೆ, ಕನ್ನಡತಿ ಎಪಿಸೋಡ್ಗಳನ್ನ ಮಿಸ್ ಮಾಡ್ದೆ ನೋಡಿ, ಮಾನ್ವಿತಾ ಜತೆ ಕಳೆದ ಸಮಯ ಚೆನ್ನಾಗಿತ್ತು" ಎಂದು ಬರೆದುಕೊಂಡಿದ್ದಾರೆ.

SCROLL FOR NEXT