ಸಿನಿಮಾ ಸುದ್ದಿ

ಕೋವಿಡ್ ಸೋಂಕಿನಿಂದ ಗುಣಮುಖ: ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಮಿಲ್ಕಿ ಬ್ಯೂಟಿ ತಮನ್ನಾ

Nagaraja AB

ಮುಂಬೈ:  ಮಿಲ್ಕಿ ಬ್ಯೂಟಿ  ತಮನ್ನಾ  ಕೋವಿಡ್ -19  ಸೋಂಕಿನಿಂದ  ಗುಣಮುಖರಾಗಿದ್ದು, ಇದೀಗ ಮುಂಬೈನಲ್ಲಿರುವ  ತಮ್ಮ  ಮನೆ ಸೇರಿಕೊಂಡಿದ್ದಾರೆ.

 ಹೈದರಾಬಾದ್ ನಲ್ಲಿ  ಚಿತ್ರವೊಂದರ   ಚಿತ್ರೀಕರಣಕ್ಕಾಗಿ  ತೆರಳಿದ್ದಾಗ ತಮನ್ನಾ  ಕೋವಿಡ್  ಸೋಂಕಿಗೆ ಒಳಗಾಗಿದ್ದರು. ನಂತರ ಅವರು ಹೈದರಾಬಾದ್ ನ  ಕಾಂಟಿನೆಂಟಲ್  ಹಾಸ್ಪಿಟಲ್ ಗೆ   ದಾಖಲಾಗಿದ್ದರು.

ಶೀಘ್ರ  ಚೇತರಿಸಿಕೊಳ್ಳಲಿ ಎಂದು  ಅಭಿಮಾನಿಗಳು, ಕುಟುಂಬ ಸದಸ್ಯರ ಪ್ರೀತಿಯ ಹಾರೈಕೆಯಿಂದಾಗಿ   ತಾವು ಶೀಘ್ರ ಚೇತರಿಸಿಕೊಂಡಿರುವುದಾಗಿ  ಅವರು ಹೇಳಿದ್ದಾರೆ.

ಕೋವಿಡ್ ಸೋಂಕು ತಗುಲಿದ್ದ  ಸಮಯದಲ್ಲಿ   ತಮಗೆ  ಅತ್ಯುತ್ತಮ  ಚಿಕಿತ್ಸೆ  ಕಲ್ಪಿಸಿದ್ದ  ವೈದ್ಯರಿಗೆ ಧನ್ಯವಾದ ಹೇಳಿ  ಸಂದೇಶವೊಂದನ್ನು  ಟ್ವೀಟ್  ನಲ್ಲಿ   ಪೋಸ್ಟ್ ಮಾಡಿದ್ದಾರೆ.

SCROLL FOR NEXT