ವಿಜಯ್ ಸೂರ್ಯ 
ಸಿನಿಮಾ ಸುದ್ದಿ

ವೀರಪುತ್ರ ಸಿನಿಮಾಗೆ 'ಅಗ್ನಿ ಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ನಾಯಕ

ಅಗ್ನಿಸಾಕ್ಷಿ ಧಾರಾವಾಹಿಯಿಂದ ಮೂಲಕ ಪ್ರಸಿದ್ಧವಾದ ವಿಜಯ್ ಸೂರ್ಯ ಬೆಳ್ಳಿ ತೆರೆಯಲ್ಲಿ ಚಿರಪರಿಚಿತವಾಗಿದ್ದಾರೆ, ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಸ್ ದೇವರಾಜ್ ನಿರ್ದೇಶನದ ಆ್ಯಕ್ಷನ್ ಕಮರ್ಷಿಯಲ್ ಸಿನಿಮಾಗೆ ನಟ ವಿಜಯ್ ಸೂರ್ಯ ನಾಯಕರಾಗಲಿದ್ದಾರೆ.

ಈ ಸಿನಿಮಾಗೆ ಕಥೆ, ಸಂಭಾಷಣೆ ಮತ್ತು ಸಾಹಿತ್ಯ ಎಲ್ಲವನ್ನು ದೇವರಾಜ್ ಅವರೇ ಬರೆದಿದ್ದಾರೆ. ಸಿನಿಮಾ ಕಥೆ ವೈದ್ಯಕೀ ವಿಷಯದಿಂದ ಕೂಡಿದೆ, ತುಮಕೂರು ವಿವಿಯ ಬಯೋ ಕೆಮಿಸ್ಚ್ರಿ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್,ದೇವರಾಜ್ ತಮ್ಮ ಅಭಿರುಚಿಗಾಗಿ ಸಿನಿಮಾ ಮಾಡುತ್ತಿದ್ದಾರೆ.

ಸಪ್ಲಿಮೆಂಟರಿ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ನಿರ್ದೇಶಕ ದೇವರಾಜ್ ವೀರಪುತ್ರನಿಗಾಗಿ ಪೂರ್ಣ ಪ್ರಮಾಣದಲ್ಲಿ ಸಿದ್ದರಾಗಿದ್ದಾರೆ. ವೈದ್ಯಕೀಯ ವ್ಯವಸ್ಥೆ ಕುರಿತಾದ ಸಿನಿಮಾ ಇದಾಗಿದ್ದು, ಜಾನಪದ ಔಷಧ ಮತ್ತು ಆಲೋಪಥಿ ಔಷಧಿಯ ಕುರಿತ ಚರ್ಚೆ ಇದರಲ್ಲಿದೆ.

ಈ ಸಿನಿಮಾಗೆ ವಿಜಯ್ ಸೂರ್ಯ ನಾಯಕರಾಗಲಿದ್ದಾರೆ, ಅಗ್ನಿಸಾಕ್ಷಿ ಧಾರಾವಾಹಿಯಿಂದ ಮೂಲಕ ಪ್ರಸಿದ್ಧವಾದ ವಿಜಯ್ ಸೂರ್ಯ ಬೆಳ್ಳಿ ತೆರೆಯಲ್ಲಿ ಚಿರಪರಿಚಿತವಾಗಿದ್ದಾರೆ, ಈ ಸಿನಿಮಾದಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೆಪ್ಟಂಬರ್ 7 ರಂದು ವಿಜಯ್ ಸೂರ್ಯ ಹುಟ್ಟುಹಬ್ಬವಿದ್ದು,  ಅಂದು ಚಿತ್ರ ತಂಡ ಸಿನಿಮಾ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ. ತಾನ್ವಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಗುರು ಬಂಡೆ ನಿರ್ಮಾಪಕರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!