ಅನೂಪ್ ಮತ್ತು ಸುದೀಪ್ 
ಸಿನಿಮಾ ಸುದ್ದಿ

ಫ್ಯಾಂಟಮ್ ಬಳಿ ಸ್ಯಾಂಡಲ್'ವುಡ್'ಗೆ ಅಶ್ವತ್ಥಾಮನನ್ನು ಕರೆತರಲಿದ್ದಾರೆ ಅನೂಪ್-ಸುದೀಪ್

ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಫ್ಯಾಂಟಮ್ ಚಿತ್ರದ ಬಳಿಕ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಬಂಡಾರಿಯವರು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. 

ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಫ್ಯಾಂಟಮ್ ಚಿತ್ರದ ಬಳಿಕ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಬಂಡಾರಿಯವರು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. 

ದ್ವಾಪರಯುಗದ ಚಿರಂಜೀವಿ ಎಂದೇ ಕರೆಯಲ್ಪಡುವ ಅಶ್ವತ್ಥಾಮನನ್ನು ಸ್ಯಾಂಡಲ್'ವುಡ್'ಗೆ ಕರೆತರಲು ಸುದೀಪ್ ಹಾಗೂ ಅನೂಪ್ ಭಂಡಾರಿ ಸಿದ್ಧತೆ ನಡೆಸುತ್ತಿದ್ದಾರೆ. 

ಫ್ಯಾಂಟಮ್ ಬಳಿಕ ಅನೂಪ್ ಅವರು ಅಶ್ವತ್ಥಾಮ ಚಿತ್ರವನ್ನು ನಿರ್ದೇಶಿಸಲಿದ್ದು, ಈ ಚಿತ್ರ ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗಲಿದೆ. 

ಫ್ಯಾಂಟಮ್‌ ಚಿತ್ರ ಪೂರ್ಣಗೊಂಡ ನಂತರ ಹಳೆ ಪ್ರಾಜೆಕ್ಟ್‌ ‘ಬಿಲ್ಲಾ ರಂಗ ಭಾಷಾ’ ಚಿತ್ರವನ್ನು ಈ ಜೋಡಿ ಕೈಗೆತ್ತಿಕೊಳ್ಳಲಿದೆ ಎಂದು ಸಿನಿಪ್ರಿಯರು ನಿರೀಕ್ಷೆ ಮಾಡಿದ್ದರು. ಆದರೆ ಸಿನಿಪ್ರಿಯರು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಪ್ರೈಜ್‌ ಕೊಟ್ಟಿಸುವ ಈ ಜೋಡಿ ಹೊಸ ಸಿನಿಮಾದ ಟೈಟಲ್‌ ಘೋಷಣೆ ಮಾಡಿದೆ. 

ಈಗಾಗಲೇ ಚಿತ್ರದ ಮೊದಲ ನೋಟದ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಟ್ರೆಂಡಿಂಗ್‌ನಲ್ಲಿದೆ. ಪೋಸ್ಟರ್‌ನಲ್ಲಿರುವ ಹೆಸರು: ಅಶ್ವತ್ಥಾಮ, ತಂದೆಯ ಹೆಸರು: ದ್ರೋಣಾಚಾರ್ಯ, ವಯಸ್ಸು: 5200 ವರ್ಷ, ಮಿಷನ್‌: ಲೋಡಿಂಗ್‌ ಈ ಅಡಿ ಟಿಪ್ಪಣಿಯಿದ್ದು, ಇದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. 

ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ವಿವರವನ್ನು ಚಿತ್ರತಂಡ ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಕಿಚ್ಚನ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ಈ ಚಿತ್ರ ಕೂಡ ಬಿಗ್‌ ಬಜೆಟ್‌ ಸಿನಿಮಾ ಆಗಲಿದ್ದು, ‘ಅಶ್ವತ್ಥಾಮ’ನಾಗಿ ಸುದೀಪ್‌ ಅವರನ್ನೇ ನೋಡಬಹುದೆನ್ನುವ ಲೆಕ್ಕಾಚಾರದಲ್ಲಿ ಸಿನಿಪ್ರಿಯರಿದ್ದಾರೆ.

‘ನಾನು ಅಶ್ವತ್ಥಾಮ ಕಥೆಯನ್ನ ಎರಡು ವರ್ಷಗಳ ಹಿಂದೆಯೇ ಬರೆದಿದ್ದೆ. ಆಗಲೇ ಕಥೆಗೆ ಅಶ್ವತ್ಥಾಮ ಅಂತ ಹೆಸರಿಟ್ಟಿದ್ದೆ. ಇನ್ನು ಈ ಸಿನಿಮಾ ಪೌರಾಣಿಕ ಅಂತ ಹೇಳಲಾರೆ. ಅಲ್ಲ ಅಂತನೂ ಹೇಳಲಾಗದು. ಈಗಿನ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಕಥೆಯನ್ನ ತೋರಿಸಲಾಗುವುದು. ಬೆಂಗಳೂರು, ಮೈಸೂರು, ಮುಂಬೈಯಲ್ಲಿ ಚಿತ್ರ ನಡೆಯುತ್ತ ಅಂತನೂ ಅಲ್ಲ. ಕಥೆಗೆ ತಕ್ಕಂತೆ ಅದರದೇ ಒಂದು ಜಗತ್ತನ್ನೇ ಸೃಷ್ಟಿ ಮಾಡಲಾಗುತ್ತೆ. ಅಶ್ವತ್ಥಾಮ ಅಲ್ಲೇ ಇರ್ತಾನೆ.

ಸಿನಿಮಾದ ಪಾತ್ರಗಳ ಬಗ್ಗೆ ಇನ್ನೂ ಏನೂ ನಿರ್ಧರಿಸಿಲ್ಲ. ಕಥೆ ಕೇಳಿದ ಕೂಡಲೇ ಸುದೀಪ್​ ಸರ್, ನಮ್ಮ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್​ನಲ್ಲೇ ಮಾಡೋಣ ಅಂದ್ರು. ಹೀಗಾಗಿ ಅನೌನ್ಸ್​ ಮಾಡಿದ್ದೇವೆ’ ಎಂದು ಅನೂಪ್ ಭಂಡಾರಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT