ಪ್ರಶಾಂತ್ ಸಂಬರಗಿ 
ಸಿನಿಮಾ ಸುದ್ದಿ

ಡ್ರಗ್ ಮಾಫಿಯಾ: ಚಿತ್ರರಂಗದ ಇಬ್ಬರು ಸ್ಟಾರ್ ನಟರ ವಿವರ ಬಹಿರಂಗಪಡಿಸುತ್ತೇನೆ- ಪ್ರಶಾಂತ್ ಸಂಬರಗಿ ಹೊಸ ಬಾಂಬ್

ಡ್ರಗ್ಸ್ ಜಾಲದ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಚಿತ್ರರಂಗದ ಇಬ್ಬರು ಸ್ಟಾರ್ ನಟರ ವಿವರ ಬಹಿರಂಗಪಡಿಸುವುದಾಗಿ ಬಾಂಬ್ ಸಿಡಿಸಿದ್ದಾರೆ. 

ಬೆಂಗಳೂರು: ಡ್ರಗ್ಸ್ ಜಾಲದ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇದೀಗ ಚಿತ್ರರಂಗದ ಇಬ್ಬರು ಸ್ಟಾರ್ ನಟರ ವಿವರ ಬಹಿರಂಗಪಡಿಸುವುದಾಗಿ ಬಾಂಬ್ ಸಿಡಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಸಂಬರಗಿ ಡ್ರಗ್ಸ್ ದಂದೆಯಲ್ಲಿ ಎಂಎಲ್ಎ ಮಗ, ಡಾರ್ಕ್ ವೆಬ್ ಬಳಕೆ ಮತ್ತು ಮತ್ತಿಬ್ಬರು ನಟರ ವಿಚಾರಣೆ ಒಂದು ಸಣ್ಣ ಎಳೆ ಅಷ್ಟೇ. ಮುಂದಿನ ದಿನಗಳಲ್ಲಿ ಇಬ್ಬರು ದೊಡ್ಡ ನಟರ ಸಮೇತ ಇನ್ನಷ್ಟು ಜನರ ವಿವರ ಬಹಿರಂಗಪಡಿಸುತ್ತೇನೆ. ಡ್ರಗ್ಸ್ ಮುಕ್ತ ಭಾರತಕ್ಕಾಗಿ ಒಂದಾಗೋಣ ಎಂದು ಬರೆದುಕೊಂಡಿದ್ದಾರೆ. 

ಸಂಬರಗಿ ಟ್ವೀಟ್ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ಇಷ್ಟು ಸಿಸಿಬಿ ಸ್ಯಾಂಡಲ್ವುಡ್ ನ ಬಿ ಗ್ರೇಡ್ ಕಲಾವಿದರನ್ನು ಕರೆದು ವಿಚಾರಣೆ ನಡೆಸುತ್ತಿದೆ. ಇನ್ನು ಸಂಬರಗಿ ಹೇಳಿದಂತೆ ದೊಡ್ಡ ಸ್ಟಾರ ನಟರ ವಿವರ ನೀಡಿದರೆ ಮುಂದೆ ಸ್ಯಾಂಡಲ್ವುಡ್ ನ ಸ್ಟಾರ್ ನಟರ ಹೆಸರು ಹೊರ ಬೀಳಬಹುದು. 

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮಹತ್ವದ ತನಿಖೆ ಕೈಗೊಂಡಿದ್ದು ಅದಾಗಲೇ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಯಾರ್ಯಾರು ವಿಚಾರಣೆಗೆ ಹಾಜರಾಗುತ್ತಾರೋ ಕಾದು ನೋಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶನಿವಾರ ಶಾಸಕಾಂಗ ಪಕ್ಷದ ಸಭೆ, ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಸೌದಿಯಲ್ಲಿ ಗಲ್ಲು ಶಿಕ್ಷೆ: 20 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಕೇರಳ ವ್ಯಕ್ತಿ, 28 ದಿನಗಳಲ್ಲೇ ಬದಲಾದ ಬದುಕು, ಅತೀ ದೊಡ್ಡ ಕ್ರೌಡ್ ಫಂಡಿಂಗ್ ಅಭಿಯಾನ!

SCROLL FOR NEXT