ಸಿನಿಮಾ ಸುದ್ದಿ

ನಟ ಶರಣ್ ಆಸ್ಪತ್ರೆಯಿಂದ ಡಿಸ್ಚಾರ್ಜ್

Raghavendra Adiga

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ.

"ಅವತಾರ ಪುರುಷ" ಸಿನಿಮಾ ಚಿತ್ರೀಕರಣದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ನಟ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಸಧ್ಯ ಚಿಕಿತ್ಸೆ ಪಡೆದು ಗುಣಮುಖರಾದ ಹಿನ್ನೆಲೆ ವೌದ್ಯರ ಸಲಹೆ ಮೇರೆಗೆ ಮನೆಗೆ ವಾಪಾಸಾಗಿದ್ದಾರೆ.

ಕಿಡ್ನಿಯಲ್ಲಿ ಕಲ್ಲು ಪತ್ತೆಯಾಗಿದ್ದು ಮೂರು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೊಟ್ಟೆ ನೋವು ಕಡಿಮೆಯಾಗದೆ ಹೋದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ ಎಂದು ಶರಣ್ ಅವರ ಸೋದರಿ ನಟಿ ಶ್ರುತಿ ಮಾಹಿತಿ ನೀಡಿದ್ದಾರೆ. 

SCROLL FOR NEXT