ಸಿನಿಮಾ ಸುದ್ದಿ

ಡಾ.ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ: ಮುಖ್ಯಮಂತ್ರಿ ಸೇರಿದಂತೆ ಗಣ್ಯರು, ಕಲಾವಿದರು, ಅಭಿಮಾನಿಗಳು, ಕುಟುಂಬ ವರ್ಗ ಸ್ಮರಣೆ 

Sumana Upadhyaya

ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಅನಭಿಷಿಕ್ತ ನಟಸಾರ್ವಭೌಮ ಡಾ ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ.  ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಡಾ ರಾಜ್ ಕುಮಾರ್ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದವರು.

ಇಂದಿಗೂ ಅವರನ್ನು ನೆನೆಸಿಕೊಳ್ಳದವರು ಬಹುಶಃ ಕರ್ನಾಟಕದಲ್ಲಿ ಯಾರೂ ಇರಲಿಕ್ಕಿಲ್ಲ. ಅಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರಾಗಿದ್ದಾರೆ. ಅವರ ಅಚ್ಚಳಿಯದ ಚಿತ್ರಗಳು, ನಟನೆ, ಅದ್ಬುತ ಕಂಠಕ್ಕೆ ಮನಸೋಲದವರಿಲ್ಲ. 2006ರ ಏಪ್ರಿಲ್ 12ರಂದು ಡಾ ರಾಜ್ ಕುಮಾರ್ ಭೌತಿಕವಾಗಿ ಅಗಲಿಹೋದರು. ಆಗ ಅವರಿಗೆ 76 ವರ್ಷವಾಗಿತ್ತು.

ಅವರ ನಿಧನ ನಂತರವೂ ಅವರ ಹೆಸರಿನಲ್ಲಿ ಜನ್ಮದಿನ ಮತ್ತು ಪುಣ್ಯದಿನದಂದು ಅಭಿಮಾನಿಗಳ ಸಂಘ, ಕುಟುಂಬ ವರ್ಗದವರು ಹತ್ತಾರು ಕಾರ್ಯಕ್ರಮಗಳು, ನೇತ್ರದಾನ, ರಕ್ತದಾನ, ಅನ್ನದಾನ , ಆರೋಗ್ಯ ತಪಾಸಣೆ ಇತ್ಯಾದಿಗಳನ್ನು ಹಮ್ಮಿಕೊಂಡು ಬಂದಿದ್ದಾರೆ.

ಇಂದು 15ನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮಕ್ಕಳು, ಕುಟುಂಬ ವರ್ಗ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು, ಸ್ಯಾಂಡಲ್ ವುಡ್ ಕಲಾವಿದರು, ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ. 

SCROLL FOR NEXT