ಸಿನಿಮಾ ಸುದ್ದಿ

'ಪಂಚಮ ಅಧ್ಯಾಯ' ಮಹಿಳಾ ಪ್ರಧಾನ ಕಥಾಸಂಕಲನ

Shilpa D

ಪಂಚಮ ಅಧ್ಯಾಯ ಕನ್ನಡದಲ್ಲಿ ಬರುತ್ತಿರುವ ಮೂರನೇ ಕಥಾ ಸಂಕಲನವಾಗಿದೆ, 1976 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಕಥಾ ಸಂಗಮ ಬಂದಿತ್ತು, ಅದಾದ ನಂತರ 2019 ರಲ್ಲಿ ಅದೇ ಟೈಟಲ್ ನಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮಾಡಿದ್ದರು.

ಅಭಿನಂದನ್ ಅರಸ್ ಅವರ ಪರಿಕಲ್ಪನೆಯಲ್ಲಿ ಬರುತ್ತಿರುವ ಸಿನಿಮಾದಲ್ಲಿ ಐದು ನಿರ್ದೇಶಕರ ದೂರದೃಷ್ಟಿಯುಳ್ಳ ಕಥೆಗಳು ಮೂಡಿಬರುತ್ತಿವೆ, ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಿದೆ.

ಕುತೂಹಲಕಾರಿಯಾಗಿರುವ ಈ ಚಿತ್ರವು ಮಹಿಳಾ ಕೇಂದ್ರಿತ ಕಥೆಗಳನ್ನು ಒಟ್ಟುಗೂಡಿಸುತ್ತದೆ, ಮಾನಸಿಕ ಅಸ್ವಸ್ಥತೆ, ಮಕ್ಕಳ ಕಿರುಕುಳ, ತಲೆಮಾರಿನ ಅಂತರ ಮತ್ತು ಸ್ವಾಭಿಮಾನದ ವಿಷಯಗಳನ್ನು ಎತ್ತಿ ತೋರಿಸುತ್ತದೆ.

ಚಿತ್ರದ ಮೊದಲ ಕೆಲವು ಸ್ಟಿಲ್‌ಗಳನ್ನು ಹಂಚಿಕೊಂಡ ಅಭಿನಂದನ್, ಅವರೊಂದಿಗೆ ಮೊದಲ ಬಾರಿಗೆ ನಿರ್ದೇಶಕರಾದ ಅನಿಲ್ ಕುಮಾರ್ ಬಿ ಹೆಚ್, ನಾಗಭೂಷಣ್ ದೇಶಪಾಂಡೆ, ಪವನ್ ಶಂಕರ್, ಮತ್ತು ರಂಜನ್ ವಿ.ವಿ  ಪಾದಾರ್ಪಣೆ ಮಾಡುತ್ತಿದ್ದಾರೆ.

ರಾಜೇಶ್ ನಟರಂಗ, ಶ್ರೀಧರ್ ಕೆ.ಎಸ್. ಅರುಣಾ ಬಾಲರಾಜ್, ಚಂದನ್ ಆಚಾರ್, ನಿಶಾ ಬಿಕೆ, ಮಯೂರಿ ನಟರಾಜ್ ಮತ್ತು ಐಶ್ವರ್ಯ ಗೌಡ ಮುಂತಾದವರು ನಟಿಸಿದ್ದಾರೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಅಭಿನಂದನ್ ಜೂನ್‌ನಲ್ಲಿ ಚಿತ್ರ ರಿಲೀಸ್ ಮಾಡಲು ನೋಡುತ್ತಿದ್ದಾರೆ,

SCROLL FOR NEXT