ಜಗ್ಗೇಶ್ 
ಸಿನಿಮಾ ಸುದ್ದಿ

'ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ, ತಿನ್ನಲು ಅನ್ನಸಿಗದೆ ಸಾಯುತ್ತೀರಿ'

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಂದ ಆಸ್ಪತ್ರೆಯಲ್ಲಿ, ಆಂಬುಲೆನ್ಸ್‌, ಚಿತಾಗಾರದವರು ಹಣ ವಸೂಲಿ ಮಾಡುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಈ ಕುರಿತು ನಟ ಜಗ್ಗೇಶ್‌ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಂದ ಆಸ್ಪತ್ರೆಯಲ್ಲಿ, ಆಂಬುಲೆನ್ಸ್‌, ಚಿತಾಗಾರದವರು ಹಣ ವಸೂಲಿ ಮಾಡುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಈ ಕುರಿತು ನಟ ಜಗ್ಗೇಶ್‌ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಕೋವಿಡ್ ಸಂತ್ರಸ್ತರು ನೊಂದುTvಲಿ ಮಾತಾಡಿದ್ದು ನೋಡಿ ಸಂಕಟವಾಯ್ತು! ಆಸ್ಪತ್ರೆ,ಆಂಬುಲೆನ್ಸ್,ಔಷಧಿ ಅಂಗಡಿ,ಸ್ಮಶಾನ ಕಾರ್ಯಕರ್ತರು  ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ,ತಿನ್ನಲು ಅನ್ನಸಿಗದೆ ಸಾಯುತ್ತೀರಿ!ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ!ಸತ್ತರೆ ಹಣಬರೋಲ್ಲಾ ಪಾಪಪುಣ್ಯ ಮಾತ್ರ  ನಮ್ಮಹಿಂದೆ ಬರೋದು! ದೇವನೊಬ್ಬನಿರುವ ಎಲ್ಲ ನೋಡುತಿರುವ ಎಂದು ಹೇಳಿದ್ದಾರೆ.

‘ಇಂಥ ಸಮಯದಲ್ಲೇ ಈ ಕ್ರೂರಿಗಳು ಸಕ್ರಿಯರಾಗುವುದು. ಇಂಥ ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ, ನಾನು ಇಷ್ಟು ನೊಂದದ್ದು ಇತ್ತೀಚಿನ ಈ ಕ್ರೂರ ವರ್ತನೆಯಿಂದ. ನನಗೆ ಅರಿಯದಂತೆ ಕೆಟ್ಟಬೈಗುಳ, ಕೋಪ ಅನಾವಶ್ಯಕವಾಗಿ ಬರುತ್ತಿದೆ. ತಪ್ಪು ಎಂದು ನನ್ನ ನಾನೆ ಸರಿಪಡಿಸಿಕೊಳ್ಳುತ್ತಿರುವೆ. ಇಂಥ ದಿನಗಳನ್ನು
ಎಣಿಸಲಿಲ್ಲಾ ನಾನು, ಆಘಾತವಾಗಿದೆ’ ಎಂದಿದ್ದಾರೆ.

‘ನಾನು ಕಾಯವಾಚಮನ ದೇವರು ಮೆಚ್ಚುವಂತೆ ಐದು ಜನ ಕೋವಿಡ್ ಬಂದವರಿಗೆ ತನುಮನಧನ ಅರ್ಪಿಸಿ ಸೇವೆಮಾಡುತ್ತಿರುವೆ. ಅದರಲ್ಲಿ ಒಬ್ಬ ಬಂಧು ತೀರಿಹೋದ. ದಯಮಾಡಿ ನೀವು ನಿಮ್ಮವರಿಗೆ ಸಹಾಯ ಮಾಡಿ. ಆಗದಿದ್ದರೆ ಮೌನವಾಗಿ ಇದ್ದುಬಿಡಿ. ಟ್ವಿಟರ್‌ನಲ್ಲಿ ಸಂಬಂಧವಿಲ್ಲದ ಪ್ರಶ್ನೆ, ತೀಟೆ, ಅಣಕಕ್ಕೆ ಈ ಕೆಟ್ಟ ಪರಿಸ್ಥಿತಿ ಬಳಕೆ ಮಾಡಬೇಡಿ. ಈ ಗುಣ ಯಾರಿಗು ಶೋಭೆಯಲ್ಲಾ’ ಎಂದೂ ಜಗ್ಗೇಶ್‌ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್