ರಚನಾ ಇಂದರ್ 
ಸಿನಿಮಾ ಸುದ್ದಿ

ಶಶಾಂಕ್ ಹೊಸ ಸಿನೆಮಾ 'ಲವ್ 360' ನಾಯಕಿ ರಚನಾ ಇಂದರ್ 

'ಮೊಗ್ಗಿನ ಮನಸು' 'ಕೃಷ್ಣಲೀಲಾ' 'ಮುಂಗಾರು ಮಳೆ 2' ಚಿತ್ರಗಳ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರ 'ಲವ್ 360'ಗೆ ನಾಯಕಿಯ ಘೋಷಣೆಯಾಗಿದೆ.

ಬೆಂಗಳೂರು: 'ಮೊಗ್ಗಿನ ಮನಸು' 'ಕೃಷ್ಣಲೀಲಾ' 'ಮುಂಗಾರು ಮಳೆ 2' ಚಿತ್ರಗಳ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರ 'ಲವ್ 360'ಗೆ ನಾಯಕಿಯ ಘೋಷಣೆಯಾಗಿದೆ.

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಾಯಕ ನಟನಾಗಿ ಅಭಿನಯಿಸಿದ್ದ 2020ರ ಯಶಸ್ವಿ ಚಿತ್ರ ಲವ್ ಮಾಕ್ಟೇಲ್ ನಲ್ಲಿ ಮೂವರು ನಾಯಕಿಯರಲ್ಲೊಬ್ಬರಾಗಿದ್ದ ರಚನಾ ಇಂದರ್ ಇದೀಗ ಶಶಾಂಕ್ ಅವರ ಮುಂದಿನ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಚಿತ್ರತಂಡ ನಾಯಕಿಯ ಹೆಸರನ್ನು ಸೋಷಿಯಲ್ ಮೀಡಿಯಾ ಮೂಲಕ ಇಂದು ಘೋಷಿಸಿದೆ. ಈ ಚಿತ್ರದ ನಾಯಕ ನವ ನಟ ಪ್ರವೀಣ್. ಈ ಮೂಲಕ ನಿರ್ದೇಶಕ ಶಶಾಂಕ್ ಲವ್ 360 ಸಿನೆಮಾಕ್ಕೆ ಹೊಸ ಪ್ರತಿಭೆಗಳಿಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ.ಹೊಸ ನಾಯಕ-ನಾಯಕಿಯರನ್ನು ಚಿತ್ರಕ್ಕೆ ಹಾಕಿಕೊಂಡು ನವಿರಾದ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು.

ರಚನಾ ಇಂದರ್ ಈ ಮೊದಲು ಲವ್ ಮಾಕ್ಟೇಲ್ ನಂತರ ಹಲವು ಉತ್ತಮ ಸಿನೆಮಾಗಳನ್ನು ಪಡೆದುಕೊಂಡಿದ್ದಾರೆ. ಗಣೇಶ್ ನಾಯಕ ನಟನಾಗಿರುವ ಮಹೇಶ್ ಗೌಡ ನಿರ್ದೇಶನದ ಟ್ರಿಬಲ್ ರೈಡಿಂಗ್, ರಿಶಬ್ ಶೆಟ್ಟಿ ಜೊತೆಗೆ ಹರಿಕಥೆ ಅಲ್ಲ ಗಿರಿಕಥೆ ಸಿನೆಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಲವ್ 360 ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಚನಾ, ಶಶಾಂಕ್ ಸರ್ ಅವರ ಸಿನೆಮಾದಲ್ಲಿ ನಟಿಸಲು ತುಂಬಾ ಖುಷಿಯಾಗುತ್ತಿದೆ, ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಹೀರೋಯಿನ್ ಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ, ಚಿತ್ರದ ಪಾತ್ರದ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ನನಗೆ ತುಂಬಾ ಕೆಲಸ ಈ ಚಿತ್ರದ ಪಾತ್ರದಲ್ಲಿದೆ ಎಂದಷ್ಟೇ ಹೇಳಿದರು.

ಟ್ರಿಬಲ್ ರೈಡಿಂಗ್ ನಲ್ಲಿ ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು ಹರಿಕಥೆಯ ಚಿತ್ರೀಕರಣ ಮುಗಿದಿದೆ. ಸದ್ಯ ನನ್ನ ಗಮನವೆಲ್ಲವೂ ಲವ್ 360 ಸಿನೆಮಾ ಮೇಲಿದೆ. ಫೋಟೋಶೂಟ್ ನಲ್ಲಿ ಭಾಗವಹಿಸಬೇಕು, ನಂತರ ಆಗಸ್ಟ್ 27ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ರಚನಾ ಹೇಳುತ್ತಾರೆ. 

ಚಿತ್ರದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದ್ದು, ಅರ್ಜುನ್ ಜನ್ಯ ಸಂಗೀತ, ಅಭಿಲಾಷ್ ಕಲತ್ತಿ ಛಾಯಾಗ್ರಹಣವಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT