ಸಿನಿಮಾ ಸುದ್ದಿ

'ಡೇರ್ ಡೆವಿಲ್ ಮುಸ್ತಾಫಾ' ಚಿತ್ರತಂಡದಿಂದ ಲೇಖಕ ಪೂರ್ಣಚಂದ್ರ ತೇಜಸ್ವಿ ಜನ್ಮದಿನ ಪ್ರಯುಕ್ತ ವಿಶೇಷ ಸ್ಪರ್ಧೆ

'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಸಿನಿಮಾ ನಿರ್ಮಾಣದ ಹಂತದಲ್ಲಿರುವಾಗಲೇ ಚಿತ್ರತಂಡ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ 6- 16ರ ವಯೋಮಾನದವರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಬೆಂಗಳೂರು: 'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಸಿನಿಮಾ ನಿರ್ಮಾಣದ ಹಂತದಲ್ಲಿರುವಾಗಲೇ ಚಿತ್ರತಂಡ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಸ್ಪರ್ದೆಯೊಂದನ್ನು ಆಯೋಜಿಸಿದೆ. ವಿಜೇತರಿಗೆ ಹಲವು ಬಹುಮಾನಗಳುಂಟು. ಬಹುಮಾನ ಗೆಲ್ಲಲು ಓದುಗರು ಮಾಡಬೇಕಿರುವುದಿಷ್ಟೆ.

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟಾಪೀಸು' ಪುಸ್ತಕದಲ್ಲಿರುವ 'ಡೇರ್ ಡೆವಿಲ್ ಮುಸ್ತಾಫಾ' (ಪುಟ 84-95) ಕತೆಯ ನಿಮ್ಮ ಆಯ್ಕೆಯ ಯಾವುದಾದರೂ ಒಂದು ಭಾಗವನ್ನು ಓದುವ ವಿಡಿಯೋ ಮಾಡಬೇಕು.

ವಿಡಿಯೋ ಸ್ಪಷ್ಟವಾಗಿ ಕಾಣುವಂತೆ ಕೇಳುವಂತೆ ಇರಲಿ. ನೀವು ಸ್ಫುಟವಾಗಿ ಓದಬಹುದು, ಅಭಿನಯಿಸಬಹುದು, ಹಾಡಬಹುದು, ಏನು ಬೇಕಾದರೂ ಮಾಡಬಹುದು. ಕ್ರಿಯೇಟಿವ್ ಲಿಬರ್ಟಿ ತೆಗೆದುಕೊಳ್ಳಿ.

ಶೂಟ್ ಮಾಡಿದ ವಿಡಿಯೋ 2 ನಿಮಿಷದ ಒಳಗಿರಲಿ. ಅದನ್ನು ನೀವು ಫೇಸ್ಬುಕ್/ಇನ್ಸ್ಟಾಗ್ರಾಮ್/ಟ್ವಿಟರ್ ಯಾವುದಾದ್ರೂ ಕನಿಷ್ಠ ಒಂದು ಕಡೆ ಪೋಸ್ಟ್ ಮಾಡಬೇಕು. #poochantepyaragraph #daredevilmusthafa - ಈ ಎರಡೂ ಹ್ಯಾಷ್ ಟ್ಯಾಗ್ ಗಳನ್ನು ಸ್ಪೆಲ್ಲಿಂಗ್ ತಪ್ಪಿರದೇ ಹಾಕುವುದು ಕಡ್ಡಾಯ.

ವಿಡಿಯೋ ಪೋಸ್ಟ್ ಮಾಡಿದ ನಂತರ ಅದರ ಸ್ಕ್ರೀನ್ ಶಾಟ್ ಜೊತೆಗೆ, ಅಭ್ಯರ್ಥಿಯ ಹೆಸರು, ವಯಸ್ಸು, ಶಾಲೆಯ ಹೆಸರು, ಮನೆಯ ವಿಳಾಸ, ಫೋನ್ ನಂಬರ್ ಮಾಹಿತಿ ನಮಗೆ ಮೇಲ್ ಮಾಡಿ - daredevilmusthafa@gmail.com

ವಿಡಿಯೋವನ್ನು ಯಾರದೇ (ನಿಮ್ಮ ತಂದೆ/ತಾಯಿ/ಗಾರ್ಡಿಯನ್) ಅಕೌಂಟ್ ಇಂದ ಪೋಸ್ಟ್ ಮಾಡಬಹುದು. ಒಟ್ಟಿನಲ್ಲಿ ಆ ಪೋಸ್ಟ್ 'ಪಬ್ಲಿಕ್' ಆಗಿರಬೇಕು.  'ಫ್ರೆಂಡ್ಸ್ ಓನ್ಲಿ', 'ಪ್ರೈವೇಟ್'  ಅಕೌಂಟ್ ಇಂದ ಪೋಸ್ಟ್ ಮಾಡಿದರೆ ನಮಗೆ ಕಾಣಿಸುವುದಿಲ್ಲ.

ಅಭಿಯಾನದ ಕೊನೆಯಲ್ಲಿ ಆಯ್ದ ಓದುಗರಿಗೆ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾದ ಪ್ರಮುಖ ಪರಿಕರಗಳಾದ ಸೈಕಲ್, ಕ್ರಿಕೆಟ್ ಕಿಟ್, ಮ್ಯಾಜಿಕ್ ಸೆಟ್ ಜೊತೆಗೆ ಇನ್ನೂ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಸೆಪ್ಟೆಂಬರ್ 5 ರಾತ್ರಿ 12 ವಿಡಿಯೊ ಪೋಸ್ಟ್ ಮಾಡಲು ಕಡೆಯ ದಿನಾಂಕ. ಸೆಪ್ಟೆಂಬರ್ 8 ರಂದು ಬಹುಮಾನಿತರ ಪಟ್ಟಿ 'Cinemamara' ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ (6-11, 12-16 ವರ್ಷ) ವಿಂಗಡಿಸಿ ಬಹುಮಾನಿತರನ್ನು ಆಯ್ಕೆ ಮಾಡಲಾಗುವುದು.

ಒಂದು ವೇಳೆ ನಿಮ್ಮ ಬಳಿ 'ಅಬಚೂರಿನ ಪೋಸ್ಟಾಪೀಸು' ಪುಸ್ತಕ ಇಲ್ಲದಿದ್ದಲ್ಲಿ MyLang Books ಮೊಬೈಲ್ ಆ್ಯಪ್ ನಲ್ಲಿ DDM ಕೂಪನ್ ಕೋಡ್ ಬಳಸಿ 25% ವಿಶೇಷ ಡಿಸ್ಕೌಂಟ್ ನಲ್ಲಿ ಇ-ಪುಸ್ತಕ ಖರೀದಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT