ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಸೆಲೆಬ್ರಿಟಿಗಳು, ಉದ್ಯಮಿಗಳ 'ನಶೆ ನಂಟು': ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ ಮನೆ ಮೇಲೆ ಪೊಲೀಸರ ದಾಳಿ

ಕೋವಿಡ್-19 ಮಧ್ಯೆ ಕಳೆದ ವರ್ಷ ತಲ್ಲಣ ಮೂಡಿಸಿದ್ದ ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ, ಪೂರೈಕೆ ಮತ್ತು ಬಳಕೆ ದಂಧೆ ಮತ್ತಷ್ಟು ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬರುತ್ತಿದೆ.

ಬೆಂಗಳೂರು: ಕೋವಿಡ್-19 ಮಧ್ಯೆ ಕಳೆದ ವರ್ಷ ತಲ್ಲಣ ಮೂಡಿಸಿದ್ದ ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ, ಪೂರೈಕೆ ಮತ್ತು ಬಳಕೆ ದಂಧೆ ಮತ್ತಷ್ಟು ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬರುತ್ತಿದೆ.

ತನಿಖೆ ವೇಳೆ ಮತ್ತಷ್ಟು ಸೆಲೆಬ್ರಿಟಿಗಳು, ಉದ್ಯಮಿಗಳು ಭಾಗಿಯಾಗಿರುವುದು ಹೊರಗೆ ಬರುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ ಸೇರಿದಂತೆ ಹಲವರು ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಕೆಲ ಸಮಯಗಳ ಹಿಂದೆ ಕೇಳಿಬಂದಿದ್ದ ಗೋವಿಂದಪುರ ಡ್ರಗ್ಸ್​ ಕೇಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ನಟಿ ಸೋನಿಯಾ ಅಗರ್​ವಾಲ್​ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದು ಪೊಲೀಸರು ಅವರ ಮನೆ ಮೇಲೆ ದಾಳಿ ಮಾಡಿದಾಗ ಗಾಂಜಾ ಪತ್ತೆಯಾಗಿದೆ. ಇನ್ನು ಡಿಜೆ ವಚನ್​ ಚಿನ್ನಪ್ಪ, ಉದ್ಯಮಿ ಭರತ್​ ಮುಂತಾದವರ ಮನೆಯ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ.

ಡ್ರಗ್ ಪೆಡ್ಲರ್ ಥಾಮಸ್ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ಇಂದಿನ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬೆಂಗಳೂರಿನ ಬೆನ್ಸನ್ ಟೌನ್, ರಾಜಾಜಿನಗರ, ಪದ್ಮನಾಭನಗರ, ಮೊದಲಾದ ಕಡೆ ಸೆಲೆಬ್ರಿಟಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಅಪಾರ್ಟ್ ಮೆಂಟ್ ಗಳಲ್ಲಿ ಉದ್ಯಮಿ ಭರತ್ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದು ಅದರಲ್ಲಿ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.

ಗೋವಿಂದಪುರ ಡ್ರಗ್ಸ್​ ಪ್ರಕರಣದಲ್ಲಿ ಉದ್ಯಮಿ ಭರತ್​ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಥಾಮಸ್ ನೀಡಿದ ಹೇಳಿಕೆ ಹಿನ್ನಲೆ ಆಧರಿಸಿ ದಾಳಿ ಮಾಡಿದ್ದು ಸದ್ಯ ಮತ್ತಷ್ಟು ವಿಚಾರಣೆ ಸಂಬಂಧ ಉದ್ಯಮಿ ಭರತ್ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ನಟಿ ಸೋನಿಯಾ ನಿವಾಸದಲ್ಲಿ ಪೊಲೀಸರಿಗೆ 40 ಗ್ರಾಂ ಗಾಂಜಾ ಪತ್ತೆ ಆಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಇರಲಿಲ್ಲ. ಸದ್ಯ ಅವರು ನಾಪತ್ತೆ ಆಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT