ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವಣ್ಣನ ಅಭಿಮಾನಿಗಳಿಗೆ ನಿರಾಸೆ: 'ಭಜರಂಗಿ 2' ರಿಲೀಸ್ ಮತ್ತೆ ಮುಂದೂಡಿಕೆ; ಶೀಘ್ರದಲ್ಲಿ ಹೊಸ ಡೇಟ್ ಪ್ರಕಟ

ಶಿವರಾಜ್ ಕುಮಾರ್ ನಟನೆಯ ಭಜರಂಗಿ2 ಸಿನಿಮಾ ರಿಲೀಸ್ ಮತ್ತೆ ಮುಂದೂಡಲಾಗಿದೆ, ಸೆಪ್ಟಂಬರ್ 10ಕ್ಕೆ ಗಣೇಶ ಚತುರ್ಥಿಯಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಶಿವರಾಜ್ ಕುಮಾರ್ ನಟನೆಯ ಭಜರಂಗಿ2 ಸಿನಿಮಾ ರಿಲೀಸ್ ಮತ್ತೆ ಮುಂದೂಡಲಾಗಿದೆ, ಸೆಪ್ಟಂಬರ್ 10ಕ್ಕೆ ಗಣೇಶ ಚತುರ್ಥಿಯಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಚಿತ್ರರಂಗವನ್ನು ಕೊರೊನಾ ವೈರಸ್​ ಕಾಡುತ್ತಿದೆ. ಮೊದಲನೇ ಅಲೆ ಆರಂಭ ಆದಾಗಿನಿಂದ ಇಂದಿನವರೆಗೆ ಸಿನಿಮಾರಂಗದ ವ್ಯವಹಾರದ ಮೇಲೆ ಪೆಟ್ಟು ಬೀಳುತ್ತಲೇ ಇದೆ.   ಶಿವರಾಜ್​ಕುಮಾರ್​ ನಟನೆಯ ಬಹುನಿರೀಕ್ಷಿತ ‘ಭಜರಂಗಿ 2 ಸಿನಿಮಾ ಸೆ.10ರಂದು ಬಿಡುಗಡೆಯಾಗಲು ಸಜ್ಜಾಗಿತ್ತು. 

‘ಸೆ.1ರಂದು ನಮ್ಮ ಚಿತ್ರದ ಟ್ರೇಲರ್​ ಬಿಡುಗಡೆ ಆಗಬೇಕಿತ್ತು. ಸೆ.10 ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ನಿಮಗೂ ಗೊತ್ತು. ಕೊರೊನಾ ಕೇಸ್​ಗಳು ಜಾಸ್ತಿ ಆಗುತ್ತಿವೆ. ವೀಕೆಂಡ್​ ಲಾಕ್​ಡೌನ್​ ಮತ್ತು ನೈಟ್​ ಕರ್ಫ್ಯೂ ಇರುವುದರಿಂದ ಸೆ.10ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಆದಷ್ಟು ಬೇಗ ಹೊಸ ರಿಲೀಸ್​ ದಿನಾಂಕವನ್ನು ನಾವು ನಿಮಗೆ ತಿಳಿಸುತ್ತೇವೆ. ತುಂಬಾ ಲೇಟ್​ ಆಗುವುದಿಲ್ಲ. ಆದಷ್ಟು ಬೇಗ ರಿಲೀಸ್​ ಮಾಡಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಶೇ.100ರಷ್ಟು ಚಿತ್ರಮಂದಿರ ತುಂಬಿದ್ದಾಗಲೇ ಜನರು ಸಿನಿಮಾದ ಮಜವನ್ನು ಅನುಭವಿಸಬಹುದು. ತಡ ಆಗುತ್ತಿರುವುದಕ್ಕೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಟ್ರೇಲರ್​ ರಿಲೀಸ್​ ಮಾಡಿ, ಅದರಲ್ಲೇ ಹೊಸ ರಿಲೀಸ್​ ಡೇಟ್​​ ತಿಳಿಸುತ್ತೇವೆ’ ಎಂದು ಶಿವಣ್ಣ ಹೇಳಿದ್ದಾರೆ.

‘ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಷ್ಟೇ ಅಡೆತಡೆಗಳು ಬಂದರೂ ಆಂಜನೇಯ ಸ್ವಾಮಿ ಕೃಪೆಯಿಂದ ಮುನ್ನುಗ್ಗಿಕೊಂಡು ಹೋಗುತ್ತಿದ್ದೇವೆ. ನಾವು ಪಟ್ಟ ಕಷ್ಟವನ್ನು ನೀವು ಅನುಭವಿಸಬಾರದು. ನೀವು ಆರಾಮಾಗಿ ಬಂದು ಸಿನಿಮಾ ನೋಡಬೇಕು. ನಾವು ಪಟ್ಟಿರುವ ಕಷ್ಟಕ್ಕೆ ನೀವು ಪ್ರತಿಫಲ ನೀಡುತ್ತೀರಿ ಎಂಬ ಭರವಸೆ ಇದೆ. ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಇಡೀ ತಂಡದಿಂದ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ’ ಎಂದು ಅಭಿಮಾನಿಗಳ ಜೊತೆ ಶಿವರಾಜ್​ಕುಮಾರ್​ ಮಾಹಿತಿ ಹಂಚಿಕೊಂಡಿದ್ದಾರೆ.

ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ‘ಭಜರಂಗಿ’ ಸೂಪರ್​ ಹಿಟ್​ ಆಗಿದ್ದರಿಂದ ‘ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT