ಅದಿತ್ ನವೀನ್ ಮತ್ತು ಕೃತಿ ಗೌಡ 
ಸಿನಿಮಾ ಸುದ್ದಿ

ಆದಿತ್ ನವೀನ್ ನಿರ್ದೇಶನದ 'ಬ್ರೇಕ್ ಫೈಲ್ಯೂರ್' ಡಿಸೆಂಬರ್ 10 ರಂದು ರಿಲೀಸ್

ಡಿಸೆಂಬರ್ 10 ರಂದು ತೆರೆ ಕಾಣುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ಆದಿತ್ ನವೀನ್ ನಿರ್ದೇಶನದ ಚೊಚ್ಚಲ ಸಿನಿಮಾ ಬ್ರೇಕ್ ಫೆಲ್ಯೂರ್ ಕೂಡ ಸೇರಿದೆ.

ಡಿಸೆಂಬರ್ 10 ರಂದು ತೆರೆ ಕಾಣುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ಆದಿತ್ ನವೀನ್ ನಿರ್ದೇಶನದ ಚೊಚ್ಚಲ ಸಿನಿಮಾ ಬ್ರೇಕ್ ಫೆಲ್ಯೂರ್ ಕೂಡ ಸೇರಿದೆ.

ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಆದಿತ್ ನವೀನ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಕಾಲೇಜು ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಆದಿತ್ ನವೀನ್ ಬಂದಿದ್ದಾರೆ, ಸಿನಿಮಾದ ಕೆಲವು ಪ್ರಮುಖ ದೃಶ್ಯಗಳನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ನಾಯಕಿಯಾಗಿ ಕೃತಿ ಗೌಡ ಹಾಗೂ ಉಗ್ರಂ ಖ್ಯಾತಿಯ ರವಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

ಬ್ರೇಕ್ ಫೆಲ್ಯೂರ್ ಚಿತ್ರಕ್ಕೆ ಅಭಿಷೇಕ್ ಜಿ ರಾಯ್ ಮತ್ತು ಕೆವಿನ್ ಎನ್ ಸಂಗೀತ ಮತ್ತು ರಿಷಿಕೇಶ್ ಅವರ ಛಾಯಾಗ್ರಹಣವಿದೆ. ಚಿತ್ರದ ಸಾಹಸಗಳನ್ನು ನಾಗ್ ಕೀರ್ತಿ ಮತ್ತು ಸಂಕಲನವನ್ನು ಅಲೆಕ್ಸ್ ಮಾಡಿದ್ದಾರೆ.

ಈ ಚಿತ್ರವನ್ನು ತೆರೆಗೆ ತರಲು ಸುಮಾರು ಎರಡು ವರ್ಷಗಳ ಕಾಲ ಕಾದಿದ್ದು ಇನ್ನೂ ಕಾಯುವ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಬೇರೆ ಸಿನಿಮಾಗಳ ಬಿಡುಗಡೆಯ ದಿನವೇ ಚಿತ್ರ ಬಿಡುಗಡೆ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ನಾಯಕ ಮತ್ತು ನಿರ್ದೇಶಕ ಅದಿತ್ ನವೀನ್ ಹೇಳಿದ್ದಾರೆ.

ಈ ಮಧ್ಯೆ ನಿರ್ದೇಶಕರು ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಸಿದ್ಧರಾಗುತ್ತಿದ್ದು "ನನ್ನ ಎರಡನೇ ಚಿತ್ರದ ಅಧಿಕೃತ ಬಿಡುಗಡೆ ಜನವರಿ 12 ರಂದು ನಡೆಯಲಿದೆ.  ನಾವು ಶೀರ್ಷಿಕೆ ಮತ್ತು ಸಂಬಂಧಿತ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಗೊಳಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT