ಸಿನಿಮಾ ಸುದ್ದಿ

ನಟ ಕಮಲ್ ಹಾಸನ್ ಕೋವಿಡ್-19 ನಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ 

Nagaraja AB

ಚೆನ್ನೈ: ಎರಡು ವಾರಗಳ ಕೋವಿಡ್-19 ಚಿಕಿತ್ಸೆ ಬಳಿಕ ಗುಣಮುಖರಾಗಿರುವ ನಟ ಕಮಲ್ ಹಾಸನ್ ಶನಿವಾರ ಶ್ರೀ ರಾಮಚಂದ್ರ ವೈದ್ಯಕೀಯ ಸೆಂಟರ್ ನಿಂದ ಡಿಸ್ಚಾರ್ಜ್ ಆದರು.  ಕಮಲ್ ಹಾಸನ್ ಆಸ್ಪತ್ರೆಯಿಂದ ಹೊರಗಡೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗಿದೆ. 

ಸಾಮಾಜಿಕ ಜಾಲತಾಣದ ಮೂಲಕ ತಮಿಳಿನಲ್ಲಿ ನೋಟ್ ವೊಂದನ್ನು ಬರೆದಿರುವ ಕಮಲ್ ಹಾಸನ್, ವೈದ್ಯರು, ಸ್ನೇಹಿತರು ಹಾಗೂ ಅವರ ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಕೋವಿಡ್-19 ಪಾಸಿಟಿವ್ ವರದಿ ಬಂದ ನಂತರ ನವೆಂಬರ್ 22 ರಂದು ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ ನಲ್ಲಿ ಚಿಕಾಗೋದಿಂದ ವಾಪಸ್ಸಾದ ನಂತರ ಒಣ ಕೆಮ್ಮು ಕಾಣಿಸಿಕೊಂಡಿತ್ತು. ತದನಂತರ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಸ್ವಯಂ ಆಗಿಯೇ ಐಸೋಲೇಟೆಡ್ ಆಗಿದ್ದರು. 

ಮುಂಜಾಗ್ರತೆಯಿಂದ ಬೇಗ ಗುಣಮುಖರಾಗಬಹುದು, ಆರೋಗ್ಯ ಸರಿಯಿಲ್ಲ ಅನಿಸಿದಾಗ ಕೂಡಲೇ ಕ್ರಮ ಕೈಗೊಳ್ಳಬೇಕು, ಸೋಂಕಿನಿಂದ ನಾನು ಗುಣಮುಖರಾಗಿರುವುದಾಗಿ ಅವರು ಫೋಸ್ಟ್ ಮಾಡಿದ್ದಾರೆ. 

SCROLL FOR NEXT