ಅಲ್ಲು ಅರ್ಜುನ್-ರಶ್ಮಿಕಾ 
ಸಿನಿಮಾ ಸುದ್ದಿ

ಪುಷ್ಪ ಚಿತ್ರದಲ್ಲಿನ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಸಿಬಿಸಿ ದೃಶ್ಯಗಳಿಗೆ ಚಿತ್ರತಂಡ ಕತ್ತರಿ

ಪುಷ್ಪಾ: ದಿ ರೈಸ್ ಸಿನಿಮಾ ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಗೂ ಅಧಿಕ ಹಣವನ್ನು ಗಳಿಸಿದೆ. ಡಿಸೆಂಬರ್ 17ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ.

ಪುಷ್ಪ- ದಿ ರೈಸ್-1 ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದು, ಮೂರು ಗಂಟೆಗಳ ಅವಧಿಯನ್ನು ಹೊಂದಿದೆ. ಇದೀಗ ಈ ಸಿನಿಮಾದ ನಿರ್ಮಾಪಕರು ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾದಾತ್ಮಕ ರೊಮ್ಯಾಂಟಿಕ್​​ ದೃಶ್ಯವನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ರನ್​ಟೈಮಿಂಗ್​​ನನ್ನು ಕಡಿಮೆ ಮಾಡಲು ಅವರು ಸಿನಿಮಾದಿಂದ ಈ ದೃಶ್ಯವನ್ನು ತೆಗೆದುಹಾಕಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪುಷ್ಪಾ: ದಿ ರೈಸ್ ಸಿನಿಮಾ ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಗೂ ಅಧಿಕ ಹಣವನ್ನು ಗಳಿಸಿದೆ. ಡಿಸೆಂಬರ್ 17ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ.

ಚಿತ್ರವು ಮೂರು ಗಂಟೆಗಳ ಕಾಲ ಓಡುವುದರಿಂದ, ಒಂದು ದೃಶ್ಯವನ್ನು ತೆಗೆದುಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಒಂದು ದೃಶ್ಯದಲ್ಲಿ, ಪುಷ್ಪಾ ರಾಜ್ (ಅಲ್ಲು ಅರ್ಜುನ್) ಮತ್ತು ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಕಾರಿನಲ್ಲಿ ಕುಳಿತು ರೋಮ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಸಂಭಾಷಣೆಯ ಸಮಯದಲ್ಲಿ, ಪುಷ್ಪಾ ಶ್ರೀವಲ್ಲಿಯ ಎದೆಯನ್ನು ಮುಟ್ಟುತ್ತಾನೆ ಮತ್ತು ಅವರು ಅದರ ಬಗ್ಗೆ ಸಂಭಾಷಣೆ ನಡೆಸುತ್ತಾರೆ. ಈ ದೃಶ್ಯವನ್ನು ಕುಟುಂಬಸ್ಥರೆಲ್ಲಾರು ಕುಳಿತು ನೋಡಲು ಸಾಧ್ಯವಿಲ್ಲ. ಹಾಗಾಗಿ ನಿರ್ಮಾಪಕರು ಈ ದೃಶ್ಯವನ್ನು ತೆಗೆದು ಹಾಕಿದ್ದಾರೆ ಎನ್ನಲಾಗ್ತಿದೆ.

ಅಲ್ಲದೇ ಚಿತ್ರದ ಹೆಚ್ಚಿನ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಕೆಲವು ದೃಶ್ಯಗಳನ್ನು ತೆಗೆದ ಸಿನಿಮಾ ಆವೃತ್ತಿಯು ಸೋಮವಾರದಿಂದ (ಡಿಸೆಂಬರ್ 20) ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಪುಷ್ಪ: ದಿ ರೈಸ್-1 ಸಿನಿಮಾವು ಆಂಧ್ರಪ್ರದೇಶದ ಶೇಷಾಚಲಂ ಅರಣ್ಯದಲ್ಲಿ ಕೆಂಪು ಚಂದನದ ಕಳ್ಳಸಾಗಾಣಿಕೆದಾರರ ಜೀವನವನ್ನು ಆಧರಿಸಿದೆ. ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗ, ಪುಷ್ಪ: ದಿ ರೂಲ್, 2022ರಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್