ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: 'ಪುಷ್ಪ' ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲು

ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಓ ಅಂತವಾ' ಹಾಡಿನಲ್ಲಿ ಪುರುಷರು ಎಂದರೆ ಕೇವಲ ಕಾಮದ ಹಿಂದೆ ಬೀಳುವವರು ಎನ್ನುವ ಅರ್ಥದ ಸಾಲುಗಳಿವೆ ಎನ್ನುವ ಆರೋಪ ಕೇಳಿಬಂದಿತ್ತು. 
ಪುಷ್ಪ ಡ್ಯಾನ್ಸ್ ನಂಬರಿನಲ್ಲಿ ಸಮಂತಾ
ಪುಷ್ಪ ಡ್ಯಾನ್ಸ್ ನಂಬರಿನಲ್ಲಿ ಸಮಂತಾ

ಹೈದರಾಬಾದ್: ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ- ದಿ ರೈಸ್' ತೆಲುಗು ಸಿನಿಮಾದಲ್ಲಿನ ಡ್ಯಾನ್ ನಂಬರ್ ವಿವಾದಕ್ಕೆ ಗುರಿಯಾಗಿದೆ. ನಟಿ ಸಮಂತಾ ಹೆಜ್ಜೆ ಹಾಕಿದ್ದ ಈ ಡ್ಯಾನ್ಸ್ ನಂಬರ್ ವಿರುದ್ಧ ಪುರುಷರ ಸಂಘ ಕೋರ್ಟ್ ಮೆಟ್ಟಿಲೇರಿದೆ. 

ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಓ ಅಂತವಾ' ಹಾಡಿನಲ್ಲಿ ಪುರುಷರು ಎಂದರೆ ಕೇವಲ ಕಾಮದ ಹಿಂದೆ ಬೀಳುವವರು ಎನ್ನುವ ಅರ್ಥದ ಸಾಲುಗಳಿವೆ ಎನ್ನುವ ಆರೋಪ ಕೇಳಿಬಂದಿತ್ತು. ಪುರುಷರಿಗೆ ಅವಹೇಳನ ಉಂಟುಮಾಡುವ ಈ ಹಾಡನ್ನು ನಿಷೇಧಿಸುವಂತೆ ಕೋರಿ ಆಂಧ್ರ ಪುರುಷರ ಸಂಘ ನ್ಯಾಯಾಲಯದ ಮೆಟ್ಟಿಲೇರಿದೆ.

ನಟಿ ಸಮಂತಾ ಇತ್ತೀಚಿಗಷ್ಟೆ ತಾವು ಪತಿ ನಾಗಚೈತನ್ಯರಿಂದ ದೂರವಾಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಈ ತಾರಾದಂಪತಿಯ ವಿಚ್ಚೇದನ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಸಮಂತಾ ನಟಿಸಿದ ಹಾಡು ವಿವಾದಕ್ಕೆ ಕಾರಣವಾಗಿರುವುದು ವಿಪರ್ಯಾಸ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com