ಅಖಿಲ್ ಅಕ್ಕಿನೇನಿ 
ಸಿನಿಮಾ ಸುದ್ದಿ

ಗುರುತೇ ಸಿಗದ ರೀತಿಯಲ್ಲಿ ಬದಲಾದ ಅಕ್ಕಿನೇನಿ ನಾಗಾರ್ಜುನ ಪುತ್ರ!

ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಇತ್ತೀಚೆಗೆ ಬಿಡುಗಡೆಯಾದ 'ಮೋಸ್ಟ್ ಎಲಿಜಬೆಲ್ ಬ್ಯಾಚುಲರ್' ಸಿನಿಮಾವು ಬೆಳ್ಳಿಪರದೆಯ ಮೇಲೆ ಪ್ರೇಕ್ಷಕರ ಮೆಚ್ಚುಗೆ ಪಡೆದಿರೋದು ತಿಳಿದ ವಿಚಾರ.

ಹೈದರಬಾದ್: ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಇತ್ತೀಚೆಗೆ ಬಿಡುಗಡೆಯಾದ 'ಮೋಸ್ಟ್ ಎಲಿಜಬೆಲ್ ಬ್ಯಾಚುಲರ್' ಸಿನಿಮಾವು ಬೆಳ್ಳಿಪರದೆಯ ಮೇಲೆ ಪ್ರೇಕ್ಷಕರ ಮೆಚ್ಚುಗೆ ಪಡೆದಿರೋದು ತಿಳಿದ ವಿಚಾರ.

ಇದೀಗ ಹೊಸದಾಗಿ 'ಏಜೆಂಟ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಖಿಲ್ ಈ ಸಿನಿಮಾಗಾಗಿ ಜಿಮ್ ನಲ್ಲಿ ಹೆಚ್ಚು ಸಮಯವನ್ನ ಕಳೆಯುತ್ತಿದ್ದಾರೆ.

ಚಿತ್ರಕರಣ ಪ್ರಾರಂಭಿಸಿದಾಗಿನಿಂದ ತನ್ನ ಪಾತ್ರಕ್ಕೆ ತಕ್ಕಂತೆ ಕಾಣಲು ದೇಹದಂಡನೆಗಿಳಿದಿದ್ದು ಕೆಲವು ತಿಂಗಳುಗಳಿಂದ ಜಿಮ್ ನಲ್ಲಿ ಹೆಚ್ಚು ಶ್ರಮವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಸರತ್ತು ನಡೆಸುತ್ತಿರುವ ಫೊಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈಗಾಗಲೆ ಬಿಡುಗಡೆಗೊಂಡಿರುವ ಚಿತ್ರದ ಪೋಸ್ಟರ್ ನಿಂದಾಗಿ ಸಿನಿಮಾದ ಮೇಲೆ ನಿರೀಕ್ಷೆಗಳನ್ನ ಹೆಚ್ಚಿಸಿದೆ. ಇನ್ನು ಈ ಸಿನಿಮಾದಲ್ಲಿ ಅಖಿಲ್ ನಾಯಕಿಯಾಗಿ ಸಾಕ್ಷಿ ವೈದ್ಯ ತೆರೆಯನ್ನ ಹಂಚಿಕೊಳ್ಳಲಿದ್ದಾರೆ. ಮಲಯಾಳಂನ ಪ್ರಮುಖ ನಟ ಮಮ್ಮುಟ್ಟಿ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಎಕೆ ಎಂಟರ್ಟೈನ್ಮೆಂಟ್ಸ್ ನಿರ್ಮಾಣ ಮಾಡುತ್ತಿದ್ದು ಮುಂದಿನ ವರ್ಷ ಪ್ರೇಕ್ಷಕರ ಎದುರಿಗೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!