ಗಣೇಶ್ 
ಸಿನಿಮಾ ಸುದ್ದಿ

ನಾನು ಸೆಟ್‌ಗಳಿಗೆ ಮರಳಿದ್ದೇನೆ, ನನಗೆ ಅತ್ಯಂತ ಇಷ್ಟವಾದುದ್ದನ್ನು ಮಾಡುತ್ತಿದ್ದೇನೆ: ಗೋಲ್ಡನ್ ಸ್ಟಾರ್ ಗಣೇಶ್

ಸಾಂಕ್ರಾಮಿಕದಿಂದಾದ ಲಾಕ್‌ಡೌನ್‌ನಿಂದ ಸಿನೆಮಾ ಉದ್ಯಮ  ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಲಾವಿದರು ಮತ್ತು ತಂತ್ರಜ್ಞರು ಕೂಡ ಮತ್ತೆ ಸೆಟ್ ಗಳಿಗೆ ಬರಲು ಪ್ರಾರಂಭಿಸಿದ್ದಾರೆ

ಸಾಂಕ್ರಾಮಿಕದಿಂದಾದ ಲಾಕ್‌ಡೌನ್‌ನಿಂದ ಸಿನೆಮಾ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಲಾವಿದರು ಮತ್ತು ತಂತ್ರಜ್ಞರು ಕೂಡ ಮತ್ತೆ ಸೆಟ್ ಗಳಿಗೆ ಬರಲು ಪ್ರಾರಂಭಿಸಿದ್ದಾರೆ. ನಿರ್ದೇಶಕ ಸುನಿಯ "ಸಖತ್"ಚಿತ್ರದ ಚಿತ್ರೀಕರಣವನ್ನು ಬುಧವಾರದಿಂದ ಬೆಂಗಳೂರಿನಲ್ಲಿ ಪುನರಾರಂಭಿಸಿರುವ ಗೋಲ್ಡನ್ ಸ್ಟಾರ್ ಗಣೇಶ್, ಸೆಟ್‌ಗಳಿಗೆ ಮರಳಿರುವುದು ರಿಫ್ರೆಶ್ ಎನಿಸಿದೆ“ಇದು ಸಂತೋಷವನ್ನು ತರುವ ಕೆಲಸ, ಮತ್ತು ನಾನು ಹೆಚ್ಚು ಇಷ್ಟಪಡುವದನ್ನು ಮಾಡಲು ಹಿಂತಿರುಗಿರುವುದಕ್ಕೆ ನನಗೆ ಸಂತೋಷವಾಗಿದೆ. ಸೆಟ್ ವಾತಾವರಣ, ಸ್ನೇಹಿತರ ಭೇಟಿ, ಸಿಬ್ಬಂದಿಯೊಂದಿಗೆ ಮಾತನಾಡುವುದು ಮತ್ತು ವಿಶೇಷವಾಗಿ 2 ತಿಂಗಳ ನಂತರ ಕ್ಯಾಮೆರಾವನ್ನು ಎದುರಿಸುವುದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ" ಎಂದಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ರಿಯಾಲಿಟಿ ಶೋವೊಂದನ್ನು ಆಧರಿಸಿದ ಸುನಿ ನಿರ್ದೇಶನದ ಸಿನಿಮಾ "ಸಖತ್" ಕೋರ್ಟ್ ರೂಂ ಡ್ರಾಮಾ ಆಗಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಗಣೇಶ್ ದೃಷ್ಟಿ ವಿಶೇಷಚೇತನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ನಿಶ್ವಿಕ ನಾಯ್ಡು ಇದ್ದು  ಅವರು ಉಳಿದ ಪಾತ್ರವರ್ಗದವರೊಂದಿಗೆ ಶೂಟಿಂಗ್ ಪುನರಾರಂಭಿಸಿದ್ದಾರೆ.

ಜನರು ತಮ್ಮ ಮಾಸ್ಕ್ ಗಳ ಮೇಲೆ ಕಣ್ಣು ಹಾಯಿಸಲು ಕಲಿತಿದ್ದಾರೆ ಎಂದು ಗಣೇಶ್ ಭಾವಿಸುತ್ತಾನೆ. “ಕೆಲಸಕ್ಕೆ ಮರಳುವುದು ಅದ್ಭುತವಾಗಿದೆ, ಆದರೆ ಇದರರ್ಥ ನಾವು ಸಾಂಕ್ರಾಮಿಕ ರೋಗದಿಂದ ಮುಕ್ತರಾಗಿದ್ದೇವೆ ಎಂದಲ್ಲ. ನಾವು ಸಾಮಾನ್ಯ ಸ್ಥಿತಿಗೆ ಮರಳುವ ಭರವಸೆಯಲ್ಲಿ ಬದುಕುತ್ತಿದ್ದೇವೆ, ನಾಗರಿಕರಾಗಿ ನಾವು ಜವಾಬ್ದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಕೋವಿಡ್ -19, ಆದೇಶಗಳನ್ನು ಅನುಸರಿಸುತ್ತೇನೆ." ಗಣೇಶ್ ತಮ್ಮ ಸೆಟ್ನನಲ್ಲಿರುವ  ಪ್ರತಿಯೊಬ್ಬರೂ ಲಸಿಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. "ಎರಡನೇ ಅಲೆ  ಪ್ರಭಾವಕ್ಕೆ ಹೋಲಿಸಿದಾಗ ಮೊದಲ ಅಲೆ ಚಿಕ್ಕದಾಗಿದೆ, ಮತ್ತು ನಮ್ಮ ಪ್ರೀತಿಪಾತ್ರರನ್ನು ಸಾಂಕ್ರಾಮಿಕ ರೋಗದಿಂದಾಗಿ ಕಳೆದುಕೊಳ್ಳುವುದು ಅಸಹನೀಯವಾಗಿದೆ" ಎಂದರು.

ಜುಲೈ 2 ರಂದು ಅವರ ಜನ್ಮದಿನ, ಅಂದು ಅವರು  ಕೆಲಸಕ್ಕೆ ರಜೆ ಪಡೆಯುತ್ತಾರೆ.“ಕಳೆದ ವರ್ಷವೂ ಹೀಗೇ ಆಗಿತ್ತು. ನಾನು ಒಂದು ದಿನ ರಜೆ ತೆಗೆದುಕೊಂಡಿದ್ದೆ ಮತ್ತು ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ. ಲಾಕ್‌ಡೌನ್ ಇದೀಗ ನಿರಾಳವಾಗಿದ್ದರಿಂದ, ನನ್ನ ಮಕ್ಕಳನ್ನು ಮೈಸೂರು ಮತ್ತು ಮಡಿಕೇರಿಗೆ ಒಂದು ಪಿಕ್ ನಿಕ್ ಕರೆದೊಯ್ಯಲು ನಾನು ಯೋಜಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

"ಸಖತ್" ಅವರ 30 ದಿನಗಳ ಶೆಡ್ಯೂಲ್ ಪೋಸ್ಟ್ ಮಾಡಿ, ನಟ "ತ್ರಿಬಲ್ ರೈಡಿಂಗ್" ಮತ್ತು "ಗಾಳಿಪಟ 2"ಚಿತ್ರೀಕರಣಕ್ಕೆ ತೆರಳಲಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತಾನು ಯಾವುದೇ ಹೊಸ ಸ್ಕ್ರಿಪ್ಟ್‌ಗಳನ್ನು ಓದಿಲ್ಲ ಎಂದ ಗಣೇಶ್ ಒಬ್ಬರು ಸ್ಕ್ರಿಪ್ಟ್ ಓದುವ ಮೂಲಕ ಅಥವಾ ಒನ್-ಲೈನರ್‌ಗಳನ್ನು ಕೇಳುವ ಮೂಲಕ ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ನಿರ್ದೇಶಕರ ದೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕು. ಫೋನ್‌ನಲ್ಲಿ ಒಂದೆರಡು ಚರ್ಚೆಗಳು ನಡೆದವು, ಆದರೆ ನಾನು ಅದನ್ನು ಅಂತಿಮವಾಗಿ ನಿರ್ಧರಿಸಿಲ್ಲ ಎಂದು ಗಣೇಶ್ ಹೇಳಿದ್ದಾರೆ. ಉತ್ತಮ ಸ್ಕ್ರಿಪ್ಟ್‌ಗಾಗಿ ಹುಡುಕುತ್ತಿರುವ ಯಾವುದೇ ನಟನಿಗೆ ತಾಳ್ಮೆ ಮತ್ತು ಸ್ಥಿರ ಪ್ರಕ್ರಿಯೆಯ ಮೂಲಕ ಸಾಗಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನಾನು ವರ್ಷದಲ್ಲಿ 3 ಸಿನಿಮಾಗಳನ್ನು ಮಾಡುವ ಯೋಜನೆ ಯೋಜನೆಯ ಜತೆ ಸಾಗುತ್ತೇನೆ. ಆದರೆ ಆ ಸ್ಕ್ರಿಪ್ಟ್‌ಗಳನ್ನು ಅಂತಿಮಗೊಳಿಸಲು, ನಾನು 30 ರಿಂದ 40 ಬಾರಿ ಚರ್ಚಿಸುತ್ತೇನೆ".

ಸಾಂಕ್ರಾಮಿಕ ನಂತರದ, ಚಿತ್ರಮಂದಿರಗಳಿಗೆ ಹೋಗಿ ತಮ್ಮ ಕುಟುಂಬದೊಡನೆ ಚಲನಚಿತ್ರವನ್ನು ಆನಂದಿಸಲು ಹಾತೊರೆಯುತ್ತಿರುವುದರಿಂದ, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಕಾಯುತ್ತಿರುವುದಾಗಿ ಗಣೇಶ್ ಹೇಳಿದ್ದಾರೆ. ರೆ. "ಮನರಂಜನೆಯು ಶಾಶ್ವತವಾಗಿ ಉಳಿಯುತ್ತದೆ, ಮತ್ತು ವಿಶೇಷವಾಗಿ ಇದು ಒತ್ತಡದಿಂದ ಹೊರಬರಲು ಪರಿಣಾಮಕಾರಿಯಾದ ಮಾರ್ಗವಾಗಿದೆ. ಕೋವಿಡ್ ನಮಗೆ ಕಲಿಸಿದ ಒಂದು ಪಾಠವೆಂದರೆ ಇಂದು ನಾವು ನಾವು ಸಂತೋಷವಾಗಿರಬೇಕು ಏಕೆಂದರೆ ನಾಳೆ ಹೇಗೆಂದು ನಮಗೆ ಊಹಿಸಲು ಸಾಧ್ಯವಿಲ್ಲ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT