ನಟ ದುನಿಯಾ ವಿಜಯ್ ಮತ್ತು ತಾಯಿ ನಾರಾಯಣಮ್ಮ 
ಸಿನಿಮಾ ಸುದ್ದಿ

ನಟ 'ದುನಿಯಾ' ವಿಜಯ್ ಗೆ ಮಾತೃವಿಯೋಗ 

ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನ ಹೊಂದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದು ದುನಿಯಾ ವಿಜಯ್ ಅವರು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಬೆಂಗಳೂರು: ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನ ಹೊಂದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದು ದುನಿಯಾ ವಿಜಯ್ ಅವರು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ಮೃತರಿಗೆ 80 ವರ್ಷ ವಯಸ್ಸಾಗಿತ್ತು. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿಕೊಂಡಿರುವ ನಟ ವಿಜಯ್, 'ಅಮ್ಮ ಮತ್ತೆ ಹುಟ್ಟಿ ಬಾ' ಎಂದು ಬರೆದು ಕಂಬನಿ ಮಿಡಿದಿದ್ದಾರೆ. ಬ್ರೇನ್ ಸ್ಟ್ರೋಕ್ ಆಗಿದ್ದರಿಂದ ನಾರಾಯಣಮ್ಮ ಅವರಿಗೆ ಮನೆಯಲ್ಲಿ ಇಟ್ಟುಕೊಂಡೇ ವಿಜಯ್ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

ನಾರಾಯಣಮ್ಮ ಅವರಿಗೆ ಈ ಹಿಂದೆ ಕೊರೊನಾ ವೈರಸ್ ತಗುಲಿತ್ತು. ಅದರಿಂದ ಅವರು ಗುಣವಾಗಿದ್ದರು. ನಂತರ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ಬ್ರೇನ್ ಸ್ಟ್ರೋಕ್ ಆದ ಮೇಲೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿತ್ತು. ಆ ಹಿನ್ನಲೆಯಲ್ಲಿ ಅವರು ಹಾಸಿಗೆ ಹಿಡಿದಿದ್ದರು. 

ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಸಲಗ ಚಿತ್ರ ಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!