ವಿಜಯಲಕ್ಷ್ಮಿ ಮತ್ತು ಜಗ್ಗೇಶ್ 
ಸಿನಿಮಾ ಸುದ್ದಿ

ನಾನು ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ ಆಗಿದ್ದರೇ ಜಗ್ಗೇಶ್ ರಾಯರ ಮೇಲೆ ಆಣೆ ಮಾಡಲಿ: ವಿಜಯಲಕ್ಷ್ಮಿ

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ  ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ನಂತರ  ಬೇರೆ ಬಾಷೆ ಸಿನಿಮಾಗಳಲ್ಲೂ ನಟಿಸಿ ಸಿನಿಮಾ ಜಗತ್ತಿನಿಂದಲೇ ಮರೆಯಾಗಿದ್ದ ವಿಜಯಲಕ್ಷ್ಮಿ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ನಂತರ ಬೇರೆ ಬಾಷೆ ಸಿನಿಮಾಗಳಲ್ಲೂ ನಟಿಸಿ ಸಿನಿಮಾ ಜಗತ್ತಿನಿಂದಲೇ ಮರೆಯಾಗಿದ್ದ ವಿಜಯಲಕ್ಷ್ಮಿ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಇದೀಗ ನಟಿ ವಿಜಯಲಕ್ಷ್ಮಿ ನವರಸ ನಾಯಕ ಜಗ್ಗೇಶ್ ವಿರುದ್ಧ ಈಗ ಹರಿಹಾಯ್ದಿದ್ದಾರೆ.  

ಇತ್ತೀಚೆಗಷ್ಟೇ ವಿಡಿಯೋವೊಂದನ್ನು ಹರಿಬಿಟ್ಟಿರುವ ನಟಿ ವಿಜಯಲಕ್ಷ್ಮೀ, ಅದರಲ್ಲಿ ''ನನ್ನ ಜೀವನದಲ್ಲಿ ಮೊದಲು ದೊಡ್ಡ ವಿವಾದ ಮಾಡಿದ್ದು ನಟ ಜಗ್ಗೇಶ್. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ದೊಡ್ಡ ವಿವಾದ ಮಾಡಿದರು. ನಾಲ್ಕು ತಿಂಗಳು ಹಲವು ಯೂನಿಯನ್‌ಗಳಿಗೆ ನನ್ನನ್ನು ಕರೆಯಿಸಿ ಕ್ಷಮಾಪಣೆ ಕೇಳುವಂತೆ ಮಾಡಿದರು. ಯಾಕೆ ಅಂತಲೇ ನನಗೆ ಅರ್ಥ ಆಗಲಿಲ್ಲ.

ಆ ವಿವಾದ ಆದಾಗ ನನ್ನನ್ನು ಕಾಪಾಡಿದ್ದು ಪಾರ್ವತಮ್ಮ ರಾಜ್‌ಕುಮಾರ್. ಅವರೇ ನನ್ನನ್ನು ಆ ವಿವಾದದಿಂದ ಮುಕ್ತಿ ಕೊಡಿಸಿದರು. ಈಗ ಪಾರ್ವತಮ್ಮ ಅವರ ಜಾಗದಲ್ಲಿ ಶಿವಣ್ಣ ಇದ್ದಾರೆ.

ಜಗ್ಗೇಶ್ ಅವರು ಪ್ರತಿ ಟ್ವೀಟ್‌ಗೆ ರಾಯರನ್ನು ನೆನಪಿಸಿಕೊಳ್ಳುತ್ತಾರೆ. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ಈಗಲೂ ಅವರು ರಾಯರ ಮೇಲೆ ಆಣೆ ಮಾಡಿ ಹೇಳಲಿ. ಅವರು ಹೇಳುವುದಿಲ್ಲ. ಯಾಕಂದರೆ ಅದು ಸುಳ್ಳು. ಆ ಸಮಯದಲ್ಲಿ ನನ್ನ ವೃತ್ತಿ ಜೀವನ ಹಾಳು ಮಾಡಲು ಅವರು ಹಾಗೆ ಮಾಡಿದ್ದರು ಎಂದು ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!